
ಯಡ್ರಾಮಿ,ಮಾ4: ಹಳ್ಳದಿಂದ ಆಚೆ ಇರುವ ಜಮೀನುಗಳಿಗೆ ತೆರಳಲು ಸರಿಯಾದ ರಸ್ತೆ ಇಲ್ಲದ ಕಾರಣ ತಾಲೂಕಿನ ಗೊಬ್ಬರವಾಡಗಿ ಗ್ರಾಮದ ರೈತ ಲಚ್ಚುಮಯ್ಯ ಗುತ್ತೇದಾರ ಸುಮಾರು 4 ರಿಂದ 5 ಲಕ್ಷ ರೂಪಾಯಿ ಸ್ವಂತ ಖರ್ಚು ಮಾಡಿ ಹಳ್ಳಕ್ಕೆ ಬ್ರಿಜ್ ನಿರ್ಮಿಸಿ ಗ್ರಾಮದ ಎಲ್ಲಾ ರೈತರಿಗೆ ನಡೆದಾಡಲು ರಸ್ತೆ ಮಾಡಿಕೊಟ್ಟಿದ್ದಾರೆ.
ಜಮೀನಿಗಳಿಗೆ ಪ್ರತಿ ದಿನವೂ ಹಳ್ಳದ ನೀರನ್ನು ದಾಟಿಗೊಂಡು ಹೋಗುವ ಪರಿಸ್ಥಿತಿ ಇತು.್ತ ಆದರೆ ಇದರ ಬಗ್ಗೆ ಹಲವು ಬಾರಿ ಆಲೂರು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ, ಅಧ್ಯಕ್ಷ, ಸರ್ವಸದಸ್ಯರಗಳಿಗೆ ತಿಳಿಸಿದ್ದರು. ಆದರೆ ಯಾರೂ ಇವರ ಮನವಿಗೆ ಸ್ಪಂದಿಸಿರಲಿಲ್ಲ. ಇದನ್ನು ಕಂಡು ಲಚ್ಚುಮಯ್ಯ ಗುತ್ತೇದಾರ ಸ್ವಂತ ಖರ್ಚಿನಲ್ಲಿಯೇ ಹಳ್ಳಕ್ಕೆ ಕಿರು ಸೇತುವೆ ನಿರ್ಮಿಸಿದ್ದಾರೆ.
ಸ್ಥಳೀಯ ಶಾಸಕರಾಗಲಿ, ಮಾಜಿ ಶಾಸಕರಾಗಲಿ ಇಂತಹ ಒಳ್ಳೆಯ ಕಾರ್ಯ ಮಾಡಿದವನಿಗೆ ಸಂಬಂಧ ಪಟ್ಟ ಇಲಾಖೆಯಿಂದ ಖರ್ಚು ಮಾಡಿದ ಹಣವನ್ನು ಕೂಡ ದೊರಕಿಸಿ ಕೊಟ್ಟಿಲ್ಲವೆಂದು ಗ್ರಾಮದ ಕೆಲ ಮುಖಂಡರು ತಿಳಿಸಿದ್ದಾರೆ.
ಈ ಬ್ರಿಜ್‍ನಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ. ಈ ಕಾಮಗಾರಿ ಸ್ವಂತ ಖರ್ಚಲ್ಲಿ ನಿರ್ಮಾಣ ಮಾಡಿಕೊಟ್ಟ ರೈತನಿಗೆ ಸಂಬಂಧ ಪಟ್ಟ ಇಲಾಖೆಯಿಂದ ಅವರು ಖರ್ಚು ಮಾಡಿ ಹಣವನ್ನು ದೊರಕಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ರಸ್ತೆಯಲ್ಲಿ ಜಾನುವಾರುಗಳು, ಎತ್ತಿನಬಂಡಿ ತಿರುಗಾಡಲು ಸೂಕ್ತವಾದ ಬ್ರಿಜ್ ಇರಲಿಲ್ಲ. ಕಾರಣ ಸೇತುವೆ ಕಟ್ಟಲು ನಮ್ಮ ಗ್ರಾಮದ ಕಡೆಯಿಂದ ಪಂಚಾಯತಿಗೆ ಸಾಕಷ್ಟು ಬಾರಿ ಹೇಳಿದರೂ ಅವರು ಈ ರಸ್ತೆ ಬಗ್ಗೆ ಗಮನ ಹರಿಸಿರಲಿಲ್ಲ. ಆದ ಕಾರಣ ನಾನೇ ಖುದ್ದಾಗಿ ಈ ಕಾಮಗಾರಿಯನ್ನು ನನ್ನ ಸ್ವಂತ ಹಣದಿಂದ ಮಾಡಿದ್ದೇನೆ.
_ಗೊಬ್ಬರವಾಡಗಿ ರೈತ ಲಚ್ಚುಮಯ್ಯ ಗುತ್ತೇದಾರ