ಆಲೂರು ಗ್ರಾಪಂ ಚುನಾವಣೆ:ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ

ಬೆಂಗಳೂರು , ಮಾ,೩೧-ಉತ್ತರ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಮಾದನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ ೮ ಗಂಟೆಗೆ ಸರಿಯಾಗಿ ಮತ ಎಣಿಕೆ ಕಾರ್ಯ ಆರಂಭವಾಯಿತು.

ಒಟ್ಟು ೨೭ ಸದಸ್ಯ ರಾಷ್ಟ್ರಗಳಿಂದ ಬಲದ ಅಲೂರು ಗ್ರಾಮ ಪಂಚಾಯಿತಿಯ ೧೫ ಸ್ಥಾನಗಳಿಗೆ ಮಾ. ೨೯ ರಂದು ಮತದಾನ ನಡೆದಿತ್ತು. ಸಾರ್ವತ್ರಿಕ ಗ್ರಾಮ ಪಂಚಾಯತಿ ಚುನಾವಣೆ ವೇಳೆ ಕೇವಲ ೫ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದು ಕುದುರೆಗೆರೆ ಗ್ರಾಮದಿಂದ ಐವರು ಸದಸ್ಯರು ಆಯ್ಕೆಗೊಂಡಿದ್ದರು.ಶಿವಕುಮಾರ್, ಪದ್ಮ ಮಂಜುನಾಥ್, ಸೌಭಾಗ್ಯ ರಂಗನಾಥ್,ಪುಷ್ಪ ಮಂಜುನಾಥ್, ನರಸಿಂಹಯ್ಯ ಹುಚ್ಚ ಕದರಪ್ಪ ಚುನಾಯಿತರಾಗಿದ್ದರು.
ಉಳಿದ ೨೨ ವಾರ್ಡ್ ಗಳ ಜನತೆ ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ ಆಲೂರು ಗ್ರಾಮ ಪಂಚಾಯತಿ ಅತಂತ್ರವಾಗಿತ್ತು. ಅದರೀಗ ಮತ್ತೆ ಚುನಾವಣೆ ಘೋಷಣೆಯಾಗಿ ಏಳು ಮಂದಿ ಅವಿರೋಧ ಆಯ್ಕೆ ಗೊಂಡಿದ್ದರು.ಕುದುರೆಗೆರೆಯಿಂದ ಅನ್ನಪೂರ್ಣ ಮಂಜುನಾಥ್,ಹೆಗ್ಗಡದೇವನಪುರದಿಂದ ಎಚ್ ರವೀಂದ್ರ,ಎಚ್ ಎಂ ಲೋಕೇಶ್,ಎಸ್ ರವಿಕಿರಣ್,ವಸಂತಕುಮಾರಿ,ಎಚ್ ಶ್ರುತಿ ಹಾಗೂ ಸಣ್ಣಮ್ಮ ಅವಿರೋಧ ಆಯ್ಕೆಯಾಗಿದ್ದರು.

ಉಳಿದ ೧೫ ಸ್ಥಾನಗಳಿಗೆ ಮಾ೨೯ ರಂದು ಮತದಾನ ನಡೆದಿತ್ತು. ಆಲೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹೆಗ್ಗಡದೇವನಪುರದ ೬ ಸ್ಥಾನಗಳಿಗೆ ಈಗ ಆಶಾ ದಿನೇಶ್,ಅನಿಲ್ ಕುಮಾರ್ ಜಯರಾಜ್,ದಿಲೀಪ್ ಕುಮಾರ್, ರಾಜೇಶ್ವರಿ,ನರಸಿಂಹಮೂರ್ತಿ ಹಾಗೂ ಸೌಮ್ಯ, ತಮ್ಮೇನಹಳ್ಳಿಯ ೪ ಸ್ಥಾನಗಳಿಗೆ ಸವಿತಾ ಜಯಾರಾಂ,ರಾಮಚಂದ್ರ ರೆಡ್ಡಿ, ಗಂಗಮ್ಮ ಹಾಗೂ ನಿರ್ಮಲ,ಆಲೂರಿನ ೫ ಸ್ಥಾನಗಳಿಗೆ ಜಗದೀಶ್ ಗೌಡ,ಶಾಂತಮ್ಮ,ಅಭಿ ಮುರಳೀಧರ್,ಪೂರ್ಣಿಮಾ ಗಿರೀಶ್,ಧರ್ಮೇಂದ್ರ ಗೆಲುವು ಸಾಧಿಸಿದ್ದಾರೆ.

ಉಳಿದಿದ್ದ ೧೫ ಸ್ಥಾನಗಳಿಗೆ ೩೬ ಉಮೇದುವಾರರು ಕಣದಲ್ಲಿದ್ದರು.ಒಟ್ಟು ೨೭ ಸ್ಥಾನ ಬಲದ ಆಲೂರು ಗ್ರಾಮ ಪಂಚಾಯತಿಗೆ ಈಗ ಸಂಪೂರ್ಣ ಸದಸ್ಯ ಬಲ ಬಂದಂತಾಗಿದೆ.ಈಗಾಗಲೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿದ್ದು,ಅಧ್ಯಕ್ಷ ಸ್ಥಾನ ಎಸ್ ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.