ಆಲೂಜೀರಾ ರೈಸ್

ಬೇಕಾಗುವ ಸಾಮಗ್ರಿಗಳು
*ಆಲೂಗಡ್ಡೆ – ೧
*ಅಕ್ಕಿ – ೧ ಕಪ್
*ಜೀರಿಗೆ – ೧ ಚಮಚ
*ಒಣ ಮೆಣಸಿನಕಾಯಿ – ೨ ಪೀಸ್
*ತುಪ್ಪ – ೧ ಚಮಚ
*ದಪ್ಪ ಮೆಣಸಿನಕಾಯಿ – ೨ ಪೀಸ್
*ಕರಿಬೇವು – ೭ ಎಲೆ
*ಸಕ್ಕರೆ – ೧ ಚಮಚ
*ನಿಂಬೆರಸ – ೧ ಚಮಚ
*ಕೊತ್ತಂಬರಿ ಸೊಪ್ಪು – ೫೦ ಗ್ರಾಂ
*ಉಪ್ಪು – ೧ ಚಮಚ
*ಎಣ್ಣೆ – ೧ ಚಮಚ

ಮಾಡುವ ವಿಧಾನ:

ಕುಕ್ಕರ್‌ಗೆ ಅಕ್ಕಿ, ಅಗತ್ಯವಿರುವಷ್ಟು ನೀರು ಹಾಕಿ ೨ ವಿಷಲ್ ಕೂಗಿಸಿ. ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ. ತುಪ್ಪ, ಒಣಮೆಣಸಿನಕಾಯಿ, ಜೀರಿಗೆ, ದಪ್ಪ ಮೆಣಸಿನಕಾಯಿ, ಬೇಯಿಸಿದ ಆಲೂಗಡ್ಡೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕರಿಬೇವು ಸೇರಿಸಿ ಫ್ರೈ ಮಾಡಿ. ಈ ಮಿಶ್ರಣಕ್ಕೆ ತಯಾರಿಸಿಟ್ಟುಕೊಂಡ ಅನ್ನವನ್ನು ಹಾಕಿ ಕಲಸಿಕೊಳ್ಳಿ. ಇದರ ಮೇಲೆ ಸಕ್ಕರೆ, ನಿಂಬೆರಸ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿದರೆ ಆಲೂ ಜೀರಾ ರೈಸ್ ತಿನ್ನಲು ರೆಡಿ.