ಆಲಿಯಾ, ರಾಜ್‌ಕುಮಾರ್ ಅತ್ಯುತ್ತಮ ನಟ, ನಟಿ

ಫಿಲಂಫೇರ್ ಪ್ರಶಸ್ತಿ
ಮುಂಬೈ,ಏ.೨೮-. ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಥಿಯಾವಾಡಿ ಮತ್ತು ಹರ್ಷವರ್ಧನ್ ಕುಲಕರ್ಣಿ ಅವರ ಬದಾಯಿ ದೋ ಚಿತ್ರಗಳು ೬೮ನೇ ಫಿಲ್ಮ್ ಫೇರ್ ಪ್ರಶಸಸ್ತಿಯಲ್ಲಿ ಸಿಂಹಪಾಲು ಪಡೆದಿವೆ. ಆಲಿಯಾ ಭಟ್ ಮತ್ತು ರಾಜ್ ಕುಮಾರ್ ರಾವ್ ಅತ್ಯ್ತುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.
ಬಾಲಿವುಡ್‌ನ ಘಟಾನಿಘಟಿಗಳು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕಾಗಿ ಸಂಜಯ್ ಲೀಲಾ ಬನ್ಸಾಲಿಗಾಗಿ ಅತ್ಯುತ್ತಮ ನಿರ್ದೇಶಕ ಮತ್ತು ಆಲಿಯಾ ಭಟ್‌ಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಬದಾಯಿ ದೋ ಚಿತ್ರದ ಅಭಿನಯಕ್ಕಾಗಿ ರಾಜ್‌ಕುಮಾರ್ ರಾವ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು, ಟಬು ಮತ್ತು ಭೂಮಿ ಪೆಡ್ನೇಕರ್ ಅವರು ಭೂಲ್ ಭುಲೈಯಾ ೨ ಮತ್ತು ಬದಾಯಿ ದೋಗಾಗಿ ಕ್ರಮವಾಗಿ ಅತ್ಯುತ್ತಮ ನಟಿ ವಿಮರ್ಶಕ ಪ್ರಶಸ್ತಿ ಹಂಚಿಕೊಂಡಿದ್ದಾರೆ.
ವಿಮರ್ಶಕರ ವಿಭಾಗದಲ್ಲಿ, ಸಂಜಯ್ ಮಿಶ್ರಾ ಅವರು ವಧ್ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು
ಹಿರಿಯ ನಟ ಪ್ರೇಮ್ ಚೋಪ್ರಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅತ್ಯುತ್ತಮ ಚೊಚ್ಚಲ ಪುರುಷ ಪ್ರಶಸ್ತಿಯನ್ನು ಜುಂಡ್ ನಟ ಅಂಕುಶ್ ಗೆಡಮ್ ಪಡೆದರು. ಅನೆಕ್ ನಟಿ ಆಂಡ್ರಿಯಾ ಕೆವಿಚುಸಾ ಅತ್ಯುತ್ತಮ ಚೊಚ್ಚಲ ಮಹಿಳೆ ಪ್ರಶಸಿ ತನ್ನದಾಗಿಸಿಕೊಂಡರು.
ವಿಜೇತರ ಪಟ್ಟಿ ಇಲ್ಲಿದೆ:
ಅತ್ಯುತ್ತಮ ಚಿತ್ರ: ಗಂಗೂಬಾಯಿ ಕಥಿಯಾವಾಡಿ
ಅತ್ಯುತ್ತಮ ಚಿತ್ರ (ವಿಮರ್ಶಕರು): ಬದಾಯಿ ದೋ
ಅತ್ಯುತ್ತಮ ನಟ: ಬದಾಯಿ ದೋ ಚಿತ್ರಕ್ಕಾಗಿ ರಾಜ್‌ಕುಮಾರ್ ರಾವ್
ಅತ್ಯುತ್ತಮ ನಟಿ: ಗಂಗೂಬಾಯಿ ಕಥಿಯಾವಾಡಿಗಾಗಿ ಆಲಿಯಾ ಭಟ್
ಅತ್ಯುತ್ತಮ ನಟ (ವಿಮರ್ಶಕ ಪ್ರಶಸ್ತಿ): ವಧ್ ಚಿತ್ರಕ್ಕಾಗಿ ಸಂಜಯ್ ಮಿಶ್ರಾ
ಅತ್ಯುತ್ತಮ ನಟಿ (ವಿಮರ್ಶಕ ಪ್ರಶಸ್ತಿ: ಬದಾಯಿ ದೋ ಚಿತ್ರಕ್ಕಾಗಿ ಭೂಮಿ ಪೆಡ್ನೇಕರ್ ಮತ್ತು ಭೂಲ್ ಭುಲೈಯಾ ೨ ಗಾಗಿ ತಬು
ಅತ್ಯುತ್ತಮ ನಿರ್ದೇಶಕ: ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕಾಗಿ ಸಂಜಯ್ ಲೀಲಾ ಬನ್ಸಾಲಿ
ಅತ್ಯುತ್ತಮ ನಟ: ಜಗ್ ಜಗ್ ಜೀಯೋಗಾಗಿ ಅನಿಲ್ ಕಪೂರ್
ಅತ್ಯುತ್ತಮ ನಟ : ಬದಾಯಿ ದೋ ಚಿತ್ರಕ್ಕಾಗಿ ಶೀಬಾ ಚಡ್ಡಾ
ಅತ್ಯುತ್ತಮ ಸಂಗೀತ ಆಲ್ಬಂ: ಬ್ರಹ್ಮಾಸ್ತ್ರಕ್ಕಾಗಿ ಪ್ರೀತಮ್: ಭಾಗ ಒಂದು – ಶಿವ
ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಥಿವಾಡಿಗಾಗಿ ಪ್ರಕಾಶ್ ಕಪಾಡಿಯಾ ಮತ್ತು ಉತ್ಕರ್ಷಿಣಿ ವಶಿಷ್ಠ
ಅತ್ಯುತ್ತಮ ಚಿತ್ರಕಥೆ: ಅಕ್ಷತ್ ಗಿಲ್ಡಿಯಾಲ್, ಸುಮನ್ ಅಧಿಕಾರಿ ಮತ್ತು ಹರ್ಷವರ್ಧನ್ ಕುಲಕರ್ಣಿ ಬಧಾಯಿ ದೋ ಸೇರಿದಂತೆ ಹಲವು ಮಂದಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.