ಆಲಿಯಾ ಭಟ್ಟ್ ಕೋವಿಡ್ ಪಾಸಿಟಿವ್ ಆದರೂ ’ಗಂಗೂಬಾಯಿ….’ ಗೆ ಹೆಚ್ಚು ನಷ್ಟವಾಗಿಲ್ಲವಂತೆ!

ಆಲಿಯಾ ಭಟ್ಟ್ ಈ ದಿನಗಳಲ್ಲಿ ಕೋವಿಡ್ ೧೯ ಪಾಸಿಟಿವ್ ಆಗಿದ್ದಾರೆ. ಹಾಗೂ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. ಆಲಿಯಾರ ಕೋವಿಡ್ ವರದಿ ಪಾಸಿಟಿವ್ ಬರುವ ಮೊದಲೇ ಅವರ ಅಪ್ ಕಮಿಂಗ್ ಫಿಲ್ಮ್ ಗಂಗೂಬಾಯಿ ಕಾಠಿಯಾವಾಡಿ ಇದರ ಶೂಟಿಂಗ್ ಮುಗಿಸುವ ಸಿದ್ಧತೆಯಲ್ಲಿದ್ದರು. ಯಾಕೆಂದರೆ ಇದರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೂ ಕೋವಿಡ್ ಪಾಸಿಟಿವ್ ಆಗಿದ್ದರಿಂದ ಶೂಟಿಂಗ್ ನಿಂತಿತ್ತು.
ಇದೀಗ ಆಲಿಯಾ ಕೂಡ ಪಾಸಿಟಿವ್ ಆಗಿರುವ ಕಾರಣ ಶೂಟಿಂಗ್ ಇನ್ನೂ ಮುಂದಕ್ಕೆ ಹೋಗಿದೆ. ನಿರ್ದೇಶಕರ ಪ್ರಕಾರ ಅಂತಹ ಹೆಚ್ಚಿನ ನಷ್ಟ ಏನು ಆಗಿಲ್ಲವಂತೆ. ಆದರೂ ಬಾಲಿವುಡ್ ವರದಿಯ ಪ್ರಕಾರ ಆಲಿಯಾ ಭಟ್ಟ್ ಅವರದು ಕೇವಲ ಒಂದು ದಿನದ ಶೂಟಿಂಗ್ ಮಾತ್ರ ಉಳಿದಿದೆ. ಹಾಗಂತ ಹೆಚ್ಚು ಖರ್ಚು ಇಲ್ಲ ಎನ್ನುವಂತೆಯೂ ಇಲ್ಲ. ಯಾಕೆಂದರೆ ಬನ್ಸಾಲಿ ಅವರಿಗೆ ಈ ಒಂದು ದಿನದ ಶೂಟಿಂಗಿಗಾಗಿ ೧೬೦ ಕಾಸ್ಟ್ ಮತ್ತು ಕ್ರೂ ಮೆಂಬರ್ಸ್ ಗಳ ಮತ್ತೆ ಅಗತ್ಯವಿದೆ .ಹಾಗಾಗಿ ಆಲಿಯ ಬಂದಾಗ ಇವರೆಲ್ಲ ಮತ್ತೆ ಬರಬೇಕಾಗಿದೆ!

’ರಯಾಂಬೋ’ ದಲ್ಲಿ ಪ್ರಭಾಸ್ ನಾಯಕ ಎನ್ನುವ ಚರ್ಚೆಗೆ ವಿರಾಮ ನೀಡಿದ ಟೈಗರ್ ಶ್ರಾಫ್

ಕಳೆದ ಕೆಲವು ದಿನಗಳಿಂದ ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ನಿರ್ಮಾಣವಾಗುವ ರ?ಯಾಂಬೊ ಫಿಲ್ಮ್ ನಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರು ಟೈಗರ್ ಶ್ರಾಫ್ ರ ಬದಲಿಗೆ ನಾಯಕರಾಗಿ ಬರಲಿರುವರು ಎನ್ನುವ ಚರ್ಚೆ ನಡೆಯುತ್ತಿತ್ತು.


ಇದೀಗ ಸ್ವತಃ ಟೈಗರ್ ಶ್ರಾಫ್ ಅವರೇ ಈ ಚರ್ಚೆಗೆ ವಿರಾಮ ನೀಡಿದ್ದಾರೆ.ಅವರು ಒಂದು ಹೇಳಿಕೆಯಲ್ಲಿ “ಇದೆಲ್ಲ ಬಕ್ವಾಸ್. ಇಂಥ ಸುದ್ದಿಗಳು ಪ್ರಪಂಚದ ಯಾವ ಮೂಲೆಯಿಂದ ಮತ್ತು ಯಾಕಾಗಿ ಬರುತ್ತಿದೆಯೋ?” ಎಂದಿದ್ದಾರೆ.

ಇತ್ತೀಚಿನ ವರದಿಯಂತೆ ಗಣಪತ್ ಪಾರ್ಟ್ ೧ಮತ್ತು ಪಾರ್ಟ್ ೨, ಹೀರೋಪಂತೀ ೨, ಮತ್ತು ಬಾಗೀ ೪ ಫಿಲ್ಮ್ ಗಳಿಗೆ ಮೊದಲೇ ಡೇಟ್ ನೀಡಿರುವುದರಿಂದ ಟೈಗರ್ ಬಳಿ ಸದ್ಯಕ್ಕೆ ರ?ಯಾಂಬೊಗೆ ನೀಡಲು ಯಾವ ಡೇಟ್ಸ್ ಉಳಿದಿಲ್ಲ ಎಂದು. ಈ ಕಾರಣ ಸಿದ್ದಾರ್ಥ್ ಆನಂದ್ ಅವರು ಟೈಗರ್ ಶ್ರಾಫ್ ಬದಲಿಗೆ ಪ್ರಭಾಸ್ ರನ್ನು ಕೇಳಿದ್ದಾರೆ ಎಂದು ಚರ್ಚೆ ಬಂದಿತ್ತು.ಎಲ್ಲಿಯವರೆಗೆ ಅಂದರೆ ಪ್ರಭಾಸ್ ಗೆ ಈ ಫಿಲ್ಮ್ ನ ಸ್ಕ್ರಿಪ್ಟ್ ಕೂಡಾ ಇಷ್ಟ ಆಗಿತ್ತು ಎಂದೂ ಪ್ರಚಾರವಾಗಿತ್ತು.

’ರಾಮ್ ಸೇತು’ ತಂಡದ ೪೫ ಜ್ಯೂನಿಯರ್ ಆರ್ಟಿಸ್ಟ್ ಗಳಿಗೂ ಕೊರೊನಾ ಪಾಸಿಟಿವ್

ನಟ ಅಕ್ಷಯ್ ಕುಮಾರ್ ಅವರು ಕೊರೊನಾ ಪಾಸಿಟಿವ್ ವರದಿಯ ನಂತರ ಅವರ ಅಪ್ ಕಮಿಂಗ್ ಫಿಲ್ಮ್ ರಾಮಸೇತು ತಂಡದ ೪೫ ಜೂನಿಯರ್ ಆರ್ಟಿಸ್ಟ್ ಗಳೂ ಕೊರೊನಾ ಪಾಸಿಟಿವ್ ಆಗಿದ್ದಾರೆ .ಸದ್ಯ ಇವರೆಲ್ಲ ಕ್ವಾರಂಟೈನ್ ನಲ್ಲಿದ್ದಾರೆ.


ಬಾಲಿವುಡ್ ಮೂಲಗಳ ಅನುಸಾರ ನಿನ್ನೆ ಸೋಮವಾರದಿಂದ ನೂರು ಜನರು ರಾಮಸೇತು ಸೆಟ್ ನಲ್ಲಿ ತಮ್ಮ ಕೆಲಸ ಆರಂಭಿಸುವವರಿದ್ದರು. ಇವರೆಲ್ಲಾ ಮುಂಬೈಯ ಮಡ್ ಐಲ್ಯಾಂಡ್ ನಲ್ಲಿ ಫಿಲ್ಮ್ ನ ಸೆಟ್ ಗೆ ಸೇರಿಕೊಳ್ಳುವವರಿದ್ದರು. ಆದರೆ ಇದಕ್ಕಿಂತ ಮೊದಲೇ ಕೋವಿಡ್ ಪರೀಕ್ಷೆಯಲ್ಲಿ ೪೫ ಜನರ ರಿಪೋರ್ಟ್ ಪಾಸಿಟಿವ್ ಬಂದಿರುವುದರಿಂದ ಸದ್ಯ ಫಿಲ್ಮ್ ನ ಶೂಟಿಂಗ್ ತಡೆಹಿಡಿಯಲಾಗಿದೆ.
ನಿನ್ನೆ ಸೋಮವಾರ ಅಕ್ಷಯ್ ಕುಮಾರ್ ರನ್ನು ಪೊವಾಯಿಯ ಹೀರಾನಂದನಿ ಹಾಸ್ಪಿಟಲ್ ನಲ್ಲಿ ಭರ್ತಿಗೊಳಿಸಲಾಗಿದೆ .ಶನಿವಾರದಂದು ಅಕ್ಷಯಕುಮಾರ್ ಗೆ ಪಾಸಿಟಿವ್ ವರದಿ ಬಂದಿತ್ತು.


ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಮೊನ್ನೆ ಶನಿವಾರ ತಾನು ಪಾಸಿಟಿವ್ ಆಗಿರುವ ಸುದ್ದಿಯನ್ನು ನೀಡಿದ್ದರು. ೫೩ ವರ್ಷದ ನಟ ಅಕ್ಷಯ್ ಕುಮಾರ್ ಬರೆದಿದ್ದರು- “ಇಂದು ಬೆಳಿಗ್ಗೆ ನನ್ನ ಕೋವಿಡ್-೧೯ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ನಾನು ಎಲ್ಲ ನಿಯಮ ಪಾಲಿಸುತ್ತಿದ್ದೇನೆ. ನಾನು ಹೋಮ್ ಕ್ವಾರಂಟೈನ್ ನಲ್ಲಿ ಇದ್ದೇನೆ”ಎಂದು.