ಆಲಿಯಾ, ದೀಪಿಕಾ ಹಾಡು ವೈರಲ್

ಮುಂಬೈ,ಮೇ.೪- ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅವರು ಜೊತೆಗೂಡಿ ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗಾಗಿ ” ಚೆನ್ನಾ ಮೆರೆಯಾ” ಹಾಡು ಹಾಡಿರುವುದು ವೈರಲ್ ಆಗಿದೆ.

ಹಾಲಿ-ಮಾಜಿ ಪ್ರೇಯಸಿಯರು ಹಾಡಿರುವ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ್ದು ಅಭಿಮಾನಿಗಳಿಂದ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ

೨೦೧೮ರಲ್ಲಿ ಇಬ್ಬರು ಬಾಲಿವುಡ್ ಬೆಡಗಿಯರು ಬಾಲಿವುಡ್ ನಟ ನಿರ್ಮಾಪಕ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ “ಕಾಫಿ ವಿತ್ ಕರಣ್” ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ನಟ ರಣಬೀರ್ ಕಪೂರ್ ಗಾಗಿ ಈ ಹಾಡು ಹಾಡಿದ್ದರು.

ಹಲವು ವರ್ಷಗಳ ಕಾಲ ನಟಿ ದೀಪಿಕಾ ಪಡುಕೋಣೆ ಅವರು ನಟ ರಣಬೀರ್ ಕಪೂರ್ ಅವರೊಂದಿಗೆ ಪ್ರೀತಿ-ಪ್ರೇಮದಲ್ಲಿ ಸಿಲುಕಿದ್ದರು ಆನಂತರ ಅದನ್ನು ಕಡಿತ ಮಾಡಿಕೊಂಡು ಹೊರಬಂದಿದ್ದರು ಇದೀಗ ಆಲಿಯಾ ಭಟ್ ಅವರು ನಟ ರಣಬೀರ್ ಕಪೂರ್ ಜೊತೆ ಪ್ರೀತಿ-ಪ್ರೇಮದಲ್ಲಿದ್ದಾರೆ.

“ಎ ದಿಲ್ ಹೈ ಮುಷ್ಕಿಲ್” ಚಿತ್ರದಲ್ಲಿ ನಟ ರಣಬೀರ್ ಕಪೂರ್ ಮೇಲೆ ಚಿತ್ರಿತವಾಗಿದ್ದ ” ಚೆನ್ನಾ ಮೆರೆಯಾ” ಹಾಡು ಬಾಲಿವುಡ್ನಲ್ಲಿ ಇದೀಗ ಭಾರಿ ಸದ್ದು ಮಾಡಿದೆ.

ಶೋನಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ಪಡುಕೋಣೆ ಅವರಿಗೆ ಕರಣ್ ಜೋಹರ್ ಪ್ರೀತಿಯ ಬಗ್ಗೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ನಟಿ ದೀಪಿಕಾ ಅವರ ಪ್ರೀತಿಯಲ್ಲಿ ಇದ್ದಿದ್ದು ನಿಜ ಇದೀಗ ಅದು ಮುಗಿದ ಅಧ್ಯಾಯ ಎಂದು ಅವರು ಹೇಳಿದ್ದಾರೆ.

ಸದ್ಯ ಬಾಲಿವುಡ್ ನಟಿ ಆಲಿಯಾ ಭಟ್ ಅವರು ನಟ ರಣಬೀರ್ ಕಪೂರ್ ಅವರೊಂದಿಗೆ ಪ್ರೀತಿಯಲ್ಲಿ ಇದ್ದಾರೆ