ಆಲಿಯಾ,ರಣಬೀರ್ ಶೇಷ್ಠ ನಟಿ,ನಟ ಪ್ರಶಸ್ತಿ

ಅಹಮದಾಬಾದ್,ಜ.೨೯-“ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” ಚಿತ್ರಕ್ಕಾಗಿ ಬಾಲಿವುಡ್ ಆಲಿಯಾ ಭಟ್ ಅತ್ಯುತ್ತಮ ನಟಿ, “ಅನಿಮಲ್” ಚಿತ್ರಕ್ಕಾಗಿ ರಣಬೀರ್ ಅತ್ಯುತ್ತಮ ನಟ ಹಾಗು “೧೨ ಫೇಲ್” ಚಿತ್ರಕ್ಕಾಗಿ ವಿಕ್ರಾಂತ್ ಮಾಸ್ಸೆ ಅತ್ಯುತ್ತಮ ನಟ (ವಿಮರ್ಶಕರು) ಪ್ರಶಸ್ತಿ ಸೇರಿದಂತೆ ಫಿಲ್ಮ್ ಫೇರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕ್ರಾಂತ್ ಮಾಸ್ಸೆ ಅವರ ೧೨ ಫೇಲ್ ಅತ್ಯುತ್ತುಮ ಚಿತ್ರ ಸೇರಿದಂತೆ ಪ್ರಶಸ್ತಿಯಲ್ಲಿ ಸಿಂಹಪಾಲು ಪಡೆದಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಡೇವಿಡ್ ಧವನ್ ಅವರಿಗೆ ೨೦೨೪ ರ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ರಾತ್ರಿ ನಡೆದ ೬೯ನೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಅಹಮದಾಬಾದ್‌ನಲ್ಲಿ ಬಾಲಿವುಡ್ ನಟ, ನಟಿಯರು ಕಲಾವಿದರು ತಂತ್ರಜ್ಞರಿಂದ ಮತ್ತಷ್ಟು ಕಂಗೊಳಿಸಿತ್ತು.

ಕರಣ್ ಜೋಹರ್, ಆಯುಷ್ಮಾನ್ ಖುರಾನಾ ಮತ್ತು ಮನೀಶ್ ಪೌಲ್ ನಿರೂಪಣೆಯೊಂದಿಗೆ ಜಾನ್ವಿ ಕಪೂರ್‍ನಿಂದ ವರುಣ್ ಧವನ್‌ವರೆಗೆ ಹಲವಾರು ಸೆಲೆಬ್ರಿಟಿಗಳು ಹೆಜ್ಜೆ ಹಾಕುವ ಮೂಲಕ ಮತ್ತಷ್ಟು ರಂಗು ಮೂಡಿಸಿದ್ದರು

ಯಾರಿಗೆಲ್ಲಾ ಪ್ರಶಸ್ತಿ:

 • ನಟಿ ಅಲಿಯಾಭಟ್- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಕ್ಕೆ ಅತ್ಯುತ್ತಮ ನಟಿ. ಇದು ಅವರ ನಾಲ್ಕನೇ ಆ ಫಿಲ್ಮ್‌ಫೇರ್ ಪ್ರಶಸ್ತಿ
 • ರಣಬೀರ್ ಕಪೂರ್- ಅನಿಮಲ್ ಚಿತ್ರ- ಅತ್ಯುತ್ತಮ ನಟ
 • ೧೨ಫೇಲ್ ಅತ್ಯುತ್ತಮ ಚಿತ್ರ
 • ವಿಧು ವಿನೋದ್ ಚೋಪ್ರಾ- ಅತ್ಯುತ್ತಮ ನಿರ್ದೇಶಕ -೧೨ ಫೇಲ್
 • ವಿಕ್ರಾಂತ್ ಮಾಸ್ಸೆ ಅತ್ಯುತ್ತಮ ನಟ ಪ್ರಶಸ್ತಿ (ವಿಮರ್ಶಕರು) ೧೨ ಫೇಲ್
 • ಶೆಫಾಲಿ ಶಾ – ಥ್ರೀ ಆಫ್ ಅಸ್‌ಗಾಗಿ ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ (ವಿಮರ್ಶಕರು)
 • ರಾಣಿ ಮುಖರ್ಜಿ : (ವಿಮರ್ಶಕ ಪ್ರಶಸ್ತಿ ) ಮಿಸೆಸ್ ಚಟರ್ಜಿ ಗಿs ನಾರ್ವೆ ಚಿತ್ರಕ್ಕೆ
 • ಅತ್ಯುತ್ತಮ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ (ವಿಮರ್ಶಕರು) ಜೋರಾಮ್ (ದೇವಶಿಶ್ ಮಖಿಜಾ) ಅವರಿಗೆ
 • ಅನಿಮಲ್ ಚಿತ್ರದ ಜಮಾಲ್ ಕುಡು ಹಾಡಿನಲ್ಲಿ ಆಲಿಯಾ ಭಟ್ ಜೊತೆ ರಣಬೀರ್ ಕಪೂರ್ ಡ್ಯಾನ್ಸ್‌ಗೆ ವಿಶೇಷ ಪ್ರಶಸ್ತಿ
 • ವಿಕ್ಕಿ ಕೌಶಲ್ : ಪೊ?ಷಕನಟ ಪ್ರಶಸ್ತಿ ; ಡಂಕಿ ಚಿತ್ರಕ್ಕಾಗಿ
 • ಶಬನಾ ಅಜ್ಮಿ- ಪೋಷಕ ನಟಿ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಕ್ಕೆ
 • ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಧಕ್ ಧಕ್ ಚಿತ್ರಕ್ಕಾಗಿ ತರುಣ್ ದುಡೇಜಾ ಅವರಿಗೆ
 • ಅಲಿಜೆ ಅಗ್ನಿಹೋತ್ರಿ ಅತ್ಯುತ್ತಮ ಚೊಚ್ಚಲ ಚಿತ್ರ ಫಾರೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ
 • ಆದಿತ್ಯ ರಾವಲ್ ಅತ್ಯುತ್ತಮ ಚೊಚ್ಚಲ ನಟ ಫಿಲ್ಮ್‌ಫೇರ್ ಪ್ರಶಸ್ತಿ
 • ನಟ ಮಹೇಶ್ ಭಟ್ ಅವರಿಗೆ ಈ ಪಾತ್ರಕ್ಕೆ ಪ್ರಶಸ್ತಿ
 • ೧೨ ನೇ ಫೇಲ್ ನಟಿ ಮೇಧಾ ಶಂಕರ್ ’ಬೋಲೋ ನಾ’ ಹಾಡಿಗೆ ಪ್ರಶಸ್ತಿ
 • ಅತ್ಯುತ್ತಮ ಹಿನ್ನೆಲೆ ಗಾಯಕ ಭೂಪಿಂದರ್ ಬಬ್ಬಲ್ ಅವರಿಗೆ ಅನಿಮಲ್ ಚಿತ್ರಕ್ಕಾಗಿ ಸಂದಿದೆ.