ಆಲಿಯಾಗೆ ಅಪರಾಧಭಾವನೆ ಕಾಡುತ್ತಂತೆ

ಮುಂಬೈ,ಏ.೨೭- ಕೆಲಸ ಒತ್ತಡದಲ್ಲಿ ಮಗುವಿನ ಬಗ್ಗೆ ಕಾಳಜಿ ವಹಿಸುತ್ತಿದ್ದೇನಾ ಎನ್ನುವ ಅಪರಾಧ ಮನೋಭಾವ ಆಗಾಗ ಕಾಡುತ್ತಿರುತ್ತದೆ ಎಂದು ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿದ್ದಾರೆ.
ಒಂದೆಡೆ ಕೆಲಸ ಮತ್ತೊಂದೆಡೆ ಮಗಳ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ಆಗಿದ್ದರೂ ಕೆಲಸದ ಒತ್ತಡದಲ್ಲಿ ಮಗುವಿನ ಬಗ್ಗೆ ಕಾಳಜಿ ವಹಿಸುತ್ತಿದ್ದೇನಾ ಎನ್ನುವ ಅನುಮಾನವೂ ಕಾಡಲಾರಂಭಿಸುತ್ತದೆ ಎಂದಿದ್ದಾರೆ.
ಪ್ರತಿ ತಾಯಿಗೂ ಕೆಲಸ ಮತ್ತು ಮಗುವಿನ ಆರೈಕೆ ತುಂಬಾ ಮುಖ್ಯವಾದುದು. ಕೆಲಸ ಮತ್ತು ವೈಯಕ್ತಿಕ ಬದ್ಧತೆಗಳನ್ನು ವಿಷಯದಲ್ಲಿ ಜನರು ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಕುರಿತು ಯೋಚಿಸಿದಾಗ ತಾವು ಮಾಡಿದ್ದು ಸರಿಯೇ ಎನ್ನಿಸಲಿದೆ ಎಂದಿದ್ದಾರೆ.
ಕೆಲಸ ಮತ್ತು ಮಗುವಿನ ಬಗ್ಗೆ ಯೋಚಿಸುವಾಗ ಕೆಲವೊಮ್ಮೆ ಆತಂಕ ಉಂಟುಮಾಡುತ್ತದೆ ಆದಾಗ್ಯೂ, ಈ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಮಯ ನೀಡುವುದು ಇಂದಿನ ತುರ್ತು ಅಗತ್ಯ ಎಂದು ತಿಳಿಸಿದ್ದಾರೆ.
ಹಲವು ವರ್ಷಗಳ ಡೇಟಿಂಗ್ ನಂತರ ಕಳೆದ ವರ್ಷ ಏಪ್ರಿಲ್‌ನಲ್ಲಿ ರಣಬೀರ್ ಕಪೂರ್ ಅವರನ್ನು ವಿವಾಹವಾಗಿದ್ದ ರಣಬೀರ್ ಕಪೂರ್ ದಂಪತಿ ರಾಹಾ ಹೆಸರನಿ ಮಗಳಿದ್ದಾರೆ. ಆಲಿಯಾ ತನ್ನ ಗರ್ಭಾವಸ್ಥೆಯ ಉದ್ದಕ್ಕೂ ಸಕ್ರಿಯವಾಗಿ ಕೆಲಸ ಮಾಡಿದ್ದು ಮಾತ್ರವಲ್ಲದೆ ರಾಹಾ ಆಗಮನದ ನಂತರ ಕೆಲಸ ಮತ್ತೆ ಆರಂಭಿಸಿದ್ದಾರೆ.
“ನನ್ನ ಮಗು ಮತ್ತು ಕೆಲಸದ ಕಡೆಗೆ ಏಕಕಾಲದಲ್ಲಿ ಗಮನ ಹರಸಿಬೇಕಾಗಿದೆ, ಇದನ್ನು ನಿಭಾಯಸಿಸಲು ಮಹಿಳೆಯರಿಗೆ ಒತ್ತಡವೂ ಇರುತ್ತದೆ ಎಂದು ತಿಳಿಸಿದ್ದಾರೆ. ನಟಿಯಾಗಿ ಮಗುವನ್ನು ನೋಡಿಕೊಳ್ಳುವುದು ಮತ್ತು ಕೆಲಸ ಮುಂದುವಿರಿಸುವುದು ನಿಜಕ್ಕೂ ಸವಾಲಿನ ಕೆಲಸ ಎಂದು ಅವರು ಹೇಳಿದ್ದಾರೆ.