ಆಲಿಕಲ್ಲು ಮಳೆಗೆ ಕಲ್ಲಂಗಡಿ ಬೆಳೆ ಹಾನಿ

ಕಲಬುರಗಿ,ಮಾ19- ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆ, ಭಾರಿ ಗಾಯಿಂದಾಗಿ ರೈತರು ಬೆಳೆದ ಬೆಳೆ ನೆಲಕ್ಕಚ್ಚಿ ಸಂಪೂರ್ಣ ಹಾನಿಯಾಗಿದ್ದು, ಕೈಗೆಬಂದ ತುತ್ತು ಬಾಯಿಗೆ ಬರದಂತಾಗಿದೆ.
ಜಿಲ್ಲೆಯ ಆಳಂದ ತಾಲೂಕಿನ ಆಲಾಪೂರ (ಜೆ) ಗ್ರಾಮದ ಸರ್ವೆ ನಂ.58ರಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳು ನಾಶವಾಗಿದೆ.
ಆಲಾಪೂರ ಗ್ರಾಮದ ಸರ್ವೆ ನಂ.58ರಲ್ಲಿ ರೈತ ಶರಣಗೌಡ ಗೋವಿಂದಪ್ಪ ಪಾಟೀಲ ಅವರು, ತಮ್ಮ 3.5 ಎಕರೆ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳು ಆಲಿಕಲ್ಲು ಮಳೆಯಿಂದಾಗಿ ಹಾನಿಯಾಗಿದ್ದು, ಸುಮಾರು 5 ಲಕ್ಷ ರೂ.ಮೌಲ್ಯದ ಕಲ್ಲಂಗಡಿ ಹಣ್ಣುಗಳು ನಾಶವಾಗಿವೆ.
ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಹಾನಿಗೊಳಗಾದ ಈ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಸರ್ಕಾರ ಸೂಕ್ತ ನೆರವು ಮತ್ತು ಪರಿಹಾನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ.