ಆಲಿಕಲ್ಲು, ಅಕಾಲಿಕ ಮಳೆಯಿಂದ ಕೆಟ್ಟು ಹಾಳಾದ ಈರುಳ್ಳಿ ರೈತರು ಕಂಗಾಲು,ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ

ಔರಾದ್:ಮೇ.18: ಈ ವರ್ಷ ಈರುಳ್ಳಿ, ಬೆಳೆ ಚೆನ್ನಾಗಿದ್ದು ಇನ್ನೆನೂ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ವರ್ಷಧಾರೆಯಿಂದ ಕಟಾವಿಗೆ ಬಂದಿದ್ದ ಈರುಳ್ಳಿ ಮಳೆಯಲ್ಲಿ ನೀರು ಪಾಲಾಗಿದ್ದು ಈ ಮಳೆ ರೈತರ ಜೀವನವನ್ನು ಬೀದಿಗೆಳೆದಿದೆ.

ತಾಲ್ಲೂಕಿನ ಕೊಳ್ಳೂರ ಗ್ರಾಮದಲ್ಲಿ ಈರುಳ್ಳಿ ಬೆಳೆದು ಖುಷಿ ಯಲ್ಲಿದ್ದ ರೈತರು ಅಕಾಲಿಕ ಮಳೆಯಿಂದ ಕಣ್ಣೀರ ಧಾರೆಯಲ್ಲಿ ನಲುಗಿ ಹೋಗಿದ್ದಾರೆ. ಗ್ರಾಮದ ಅನೇಕ ರೈತರು ಈರುಳ್ಳಿ ತೆಗೆದುಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ ಒಂದೆಡೆ ಭುಮಿಯಲ್ಲೆ ಕೊಳೆಯುತ್ತಿದ್ದರೆ ಮತ್ತೊಂದೆಡೆ ಆಲಿಕಲ್ಲು ಮಳೆಯಿಂದ ನೇಲೆಕಚ್ಚಿ ಹಾಳಾಗುತ್ತಿದೆ.

ಅಕಾಲಿಕ ಮಳೆಯಿಂದ ಬೆಳೆಗಳನ್ನು ಕಳೆದುಕೊಂಡಿರುವ ಅನೇಕ ರೈತರ ಜೀವನ ಬೀದಿ ಪಾಲಾಗುವ ಮುನ್ನ ಅಂತಹ ರೈತರಿಗೆ ಸೂಕ್ತ ಸೌಕರ್ಯ ಕಲ್ಪಿಸಿ ಕೊಡಲು ಜಿಲ್ಲಾಡಳಿತ ಮುಂದಾಗಬೇಕಾಗಿದೆ. ಫಸಲಿಗೆ ಬಂದ ಈರುಳ್ಳಿ ಬೆಳೆಯನ್ನು ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಎನ್ನುತ್ತಿದ್ದ ರೈತರಿಗೆ ಮಳೆ ಆಘಾತ ನೀಡಿದೆ. ತಾಲ್ಲೂಕಿನಲ್ಲಿ ಸುರಿದ ಭಾರೀ ಮಳೆಗೆ ಈರುಳ್ಳಿ ಬೆಳೆಗಳು ಕೊಳೆಯಲಾರಂಭಿಸಿದೆ.

ಸಾಲ ಸೋಲ ಮಾಡಿ ಈರುಳ್ಳಿ ಬೆಳೆದಿದ್ದ ಬೆಳಗಾರರಿಗೆ ಈ ಬಾರಿ ಮಳೆ ನಷ್ಟ ಉಂಟು ಮಾಡಿದೆ. ಕಳೆದ ಕೆಲದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ಹೊಲಗಳಲ್ಲಿ ನೀರು ನಿಂತಿದೆ.ಇದರಿಂದಾಗಿ ಈರುಳ್ಳಿ ಗಡ್ಡೆಗಳು ಸಂಪೂರ್ಣವಾಗಿ ಹಾಳಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರೈತರ ನೆರವಿಗೆ ಆಗಮಿಸಬೇಕು ಎಂದು ಇಲ್ಲಿನ ರೈತರು ಮನವಿ ಮಾಡಿದ್ದಾರೆ.

ಮೂರು ಎಕರೆ ಈರುಳ್ಳಿ ಬೆಳೆದಿದ್ದು ಈ ವರ್ಷ ಚನ್ನಾಗಿ ಫಸಲು ಬಂದಿತ್ತು ವಾರದಿಂದ ಬಿಡುವುದಿಲ್ಲದೆ ಸುರಿದ ಅಕಾಲಿಕ ಆಲಿಕಲ್ಲು, ಮಳೆಯಿಂದಾಗಿ ಈರುಳ್ಳಿ ಬೆಳೆ ನೀರಿನಿಂದಾಗಿ ಕೊಳೆ ಭಾರಿ ನಷ್ಟ ವಾಗಿದೆ.

-ಖಂಡೆರಾವ ಪಾಟೀಲ, ಈರುಳ್ಳಿ ಬೆಳೆದ ರೈತ ಕೊಳ್ಳೂರ