ಆಲಮೇಲ ಪ.ಪಂ ಗದ್ದುಗೆ ಬಿಜೆಪಿ ಮಡಿಲಿಗೆ

ಆಲಮೇಲ:ನ.3:ಪಟ್ಟಣ ಪಂಚಾಯಿತಿಗೆ 2016 ಏಪ್ರೀಲ್ 24 ರಂದು ಚುಣಾವಣೆ ನಡೆದಿದ್ದು ಇದು ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿದ ಮೇಲೆ ಮೊದಲು ಚುಣಾವನೆ ಆಗಿತ್ತು, ಪ್ರಥಮ ಅವಧಿಗೆ ಪ.ಪಂನಲ್ಲಿ ಒಟ್ಟು 19 ಜನ ಸದಸ್ಯರ ಬಲ ಇದ್ದು ಅದರಲ್ಲಿ ಬಿಜೆಪಿ 10,ಕಾಂಗ್ರೇಸ್ 7 ಹಾಗೂ ಪಕ್ಷೇತರ 2 ಸ್ಥಾನಗಳು ಗೆದ್ದಿದ್ದವು, ಅಧ್ಯಕ್ಷರಾಗಲು 10 ಸದಸ್ಯರ ಬಲ ಸಾಕಿದರೂ ಓರ್ವ ¥ಕ್ಷೇತರÀ ಸದಸ್ಯನ್ನು ಸೆಳೆದು ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು,ಆದರೆ ಅದರ ಅವಧಿ 30 ತಿಂಗಳ ಮಾತ್ರ ಇದ್ದುದ್ದರಿಂದ 6 ಡಿಸೆಂಬರ್ 2018ಕ್ಕೆ ಮುಗಿದ್ದುಇಲ್ಲಿವರೆಗೆ ಸುಮಾರು 20 ತಿಂಗಳು ಆದರೂ ಸರಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿರಲಿಲ್ಲ ಈ ಪ್ರಕರಣ ನ್ಯಾಯಾಲಯದಲ್ಲಿ ಇದ್ದರಿಂದ ಯಾವದೇ ಮೀಸಲಾತಿ ಬಂದಿರಲಿಲ್ಲ ಆದರೆ ಈಗ ಸರಕಾರ ಎರಡನೇ ಅವಧಿಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದ್ದು ಸೋಮವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುಣಾವಣೆ ನಡೆಯಿತ್ತು.

ಅಧ್ಯಕ್ಷರಾಗಿ ಬಿಜೆಪಿಯ ಸದಸ್ಯ ಹಣಮಂತ ಹೂಗಾರ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಸಿದ್ರಾಮವ್ವ ಮೇಲಿನಮನಿ ಅವರು ಅವಿರೋಧವಾಗಿ ಆಯ್ಕೆಯಾದರು ಎಂದು ಚುಣಾವನಾ ಅಧಿಕಾರಿ ಸಿಂದಗಿ ತಹಶೀಲ್ದಾರ ಸಂಜೀವಕುಮಾರ ದಾಸರ ಘೋಷಿಸಿದರು,

ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾದ ವೇಳೆಯಲ್ಲಿ ಈ ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದರು, ವಿರೋಧ ಪಕ್ಷದಲ್ಲಿಯಾಗಲಿ ಅಥವಾ ಸ್ವಪಕ್ಷದಲ್ಲಿಯಾಗಲಿ ಯಾರು ನಾಮಪತ್ರ ಸಲ್ಲಿಸಲಿಲ್ಲ ನಂತರ ಚುಣಾವನಾ ನಿಯಮದ ಪ್ರಕಾರ ಅಧಿಕಾರಿಗಳು ಅವಕಾಶ ನೀಡಿ ಸಮಯ ಮುಗಿದ ಮೇಲೆ ಮಧ್ಯಾಹ್ನ 1 ಗಂಟೆಗೆ ಚುಣಾವಣಾ ಪ್ರಕ್ರಿಯೆ ಪ್ರಾರಂಭಿಸಿ 1-30ಕ್ಕೆ ಅಧಿಕೃತವಾಗಿ ಘೋಷಣೆ ಮಾಡಿದರು, ಚುಣಾವಣೆಯಲ್ಲಿ 19 ಜನ ಸದಸ್ಯರು ಹಾಜರಿದ್ದು ಯಾವದೇ ಸದಸ್ಯರು ಗೈರಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಫಲಿತಾಂಶ ಹೊರಬಿಳುತ್ತಿದಂತೆ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ರಾಜಕೀಯ ಮುಖಂಡರಾದ ಅಶೋಕ ಕೊಳಾರಿ, ರಮೇಶ ಬಂಟನೂರ,sಬಾಬು ಕೊತ್ತಂಬರಿ, ಪಿ.ಟಿ.ಪಾಟೀಲ್,ಗುಂಡು ಮೇಲಿನಮನಿ,ಹೂವಪ್ಪ ಪೂಜಾರಿ,ವಿಶ್ವನಾಥ ಹೀರೆಮಠ,ಶರಣು ಗುರಕಾರ,ಅಮೃತ ಕೊಟ್ಟಲಗಿ,ಸೈಪನ ದೇವರಮನಿ,ಶಫೀಕ ಜಮಾದಾರ ಮತ್ತು ಸಿಂದಗಿ ಸಿಪಿಐ ಎಚ್.ಎಮ್ ಪಾಟೀಲ,ದೇವರಹಿಪ್ಪರಗಿ ಪಿಎಸ್‍ಐ ರವಿ ಎಮ್.ವೈ,ಆಲಮೇಲ ಎಎಸ್‍ಐ ಎಲ್.ಯು ನಧಾಪ,ಜಿ.ಎಸ್.ಚಕ್ಕಡಿ ಹಾಗೂ ಡಿಆರ್ ಪೊಲೀಸ್ ಪಡೆ ಸೂಕ್ತ ಬಂದೂಬಸ್ತ ಏರ್ಪಡಿಸಿತ್ತು,ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದರು.