ಆಲಮೇಲ ಪಟ್ಟಣ ಭಣ ಭಣ

ಆಲಮೇಲ :ಎ.26:ರಾಜ್ಯ ಸರಕಾರ ಕರೋನಾ ವೈರಸ್‍ನ ಅಟ್ಟಹಾಸಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಜಾರಿಯಾಗಿರುವ ನೈಟ್ ಕಫ್ರ್ಯೂ ಹಾಗೂ ವೀಕೆಂಡ್ ಕಫ್ರ್ಯೂ ಎರಡನೇ ದಿನವಾದ ರವಿವಾರವು ಪಟ್ಟಣದಲ್ಲಿ ಸಂಪೂರ್ಣವಾಗಿ ನಿಶ್ಶಬ್ದದಿಂದ ಕೂಡಿತು. ವಿರಳ ಜನ ಸಂಚಾರ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟು ಬಂದ ಆಗಿದ್ದವು. ಕಳೆದ ಭಾರೀ ಜನರನ್ನು ಮನೆಯಲ್ಲಿ ಲಾಕ್ ಮಾಡಬೇಕಾದರೇ ಪೊಲೀಸರು ಹರಸಾಹಸ ಪಟ್ಟಿದ್ದರೂ ಆದರೆ ಈ ಸಲ ಜನ ಜಾಗೃತರಾದಂತೆ ಕಾಣುತ್ತಿದ್ದೆ ಸ್ವಯಂ ಪ್ರೇರಿತರಾಗಿ ಜನ ಮನೆಯಲ್ಲಿ ಲಾಕ ಆಗಿರುವ ದೃಶ್ಯ ಪಟ್ಟಣದಲ್ಲಿ ಕಂಡು ಬಂತು.

ಸೋಮವಾರ ಬೆಳಗ್ಗೆ 6 ಘಂಟೆಗೆ ಕಫ್ರ್ಯೂ ಅಂತ್ಯ ಆಗುತ್ತಿರುವಾಗಳೆ ಸರಕಾರ ಇನ್ನೋಂದು ವಾರದ ಕಫ್ರ್ಯೂಗೆ ಚಿಂತನೆ ನಡೆಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.ಪರಿಹಾರವಿಲ್ಲದೇ ಜಾರಿಗೊಳಿಸುತ್ತಿರುವ ಕಠಿಣ ನಿಯಮಗಳಿಗೆ ಜನರು ಯಾವ ರೀತಿ ಸಹಕಾರ ನೀಡುತ್ತಾರೆ ಎಂಬುದು ಕಾಡುನೋಡಬೇಕು.