ಆಲಮೇಲ ಪಟ್ಟಣದಲ್ಲಿ ಸ್ಯಾನಿಟೈಸರ್ ಸಿಂಪರಣೆ

ಆಲಮೇಲ:ಎ.26:ಕರೋನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣ ಪಂಚಾಯತ ವತಿನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ಯಾನಿಟೈಸರ್ ಸಿಂಪರಣೆ ಮಾಡಲಾಯಿತು. ಟಂಟಂನ ಎರಡು ಬದಿಯಲ್ಲಿ ಎರಡು ನೈಜಲ್‍ಗಳನ್ನು ಅಳವಡಿಸಿ ಸ್ಪ್ರೇ..ರೆ ಮಾಡಲಾಗುತ್ತಿದೆ.ಇದಕ್ಕಾಗಿ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ,
ಕರೋನಾ ವೈರಸ್ ತಡೆಗಟ್ಟಲು ಇದೊಂದೇ ಪರಿಹಾರವಲ್ಲ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಅನಾವಶ್ಯಕವಾಗಿ ಹೊರಗೆ ಬರದೇ ಮನೆಯಲ್ಲಿಯೇ ಇರಬೇಕು, ಆರೋಗ್ಯ ಇಲಾಖೆ ನೀಡಿರುವ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪಟ್ಟಣ ಪಂಚಾಯತ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.