
ಆಲಮೇಲ:ಮೇ.22: ನೂತನ ಆಲಮೇಲ ಪಟ್ಟಣ ದಿನೇ ದಿನೇ ಬೇಳೆಯುತ್ತಿರುವ ಪಟ್ಟಣ ವಾಗಿರುವದರಿಂದ ಆಲಮೇಲ ಸುತ್ತಮುತ್ತಲು 44 ಹಳ್ಳಿಗಳು ಇರುವದರಿಂದ ಮತ್ತು ಇಲ್ಲಿ ದುಡಿಯಲು ಬಂದಿರುವ ಕಾರ್ಮಿಕರಿಗೆ ಪಟ್ಟಣದ ವಾಸಿಗಳಿಗೆ ಒಂದು ಸರಕಾರಿ ಪಿಯು ಕಾಲೇಜು ಮತ್ತು ಸರಕಾರಿ ಡಿಗ್ರಿ ಕಾಲೇಜು ಅತ್ಯವಶ್ಯಕವಾಗಿದೆ
ಈ ಪಟ್ಟಣದಲ್ಲಿ ಸುಮಾರು 25 ಸಾವಿರ ಜನಸಂಖ್ಯೆಇದ್ದು ಆಲಮೇಲ ಪಟ್ಟಣದಲ್ಲಿ 5 ಹೈಸ್ಕೂಲ್ ಗಳಲ್ಲಿ ಸುಮಾರು 4000 ಸಾವಿರ ದಿಂದ 5000 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ 3-4 ಪಿಯುಸಿ ಕಾಲೇಜಗಳಿದು ಗಳಿದ್ದು ಆದರೆ ಒಂದೇ ಒಂದು ಸರಕಾರಿ ಪಿಯು ಕಾಲೇಜು ಮತ್ತು ಡಿಗ್ರಿಕಾಲೇಜು ಇರದಿರುವದು ವಿಷಾದ ಸಂಗತಿಯಾಗಿದೆ
ಪಟ್ಟಣದಲ್ಲಿ ಸದ್ಯ ಈಗ ಖಾಸಗಿ ಕಾಲೆಜುಗಳ ದರ್ಬಾರ್ ಪ್ರಾರಂಭವಾಗಿದೆ ಅವುಗಳ ಫೀ ಮತ್ತು ಡೊನೇಷನ್ ಹಾವಳಿ ಬಡವರ ಕೈಗೆ ನೆಲಕದಂತಾಗಿದೆ ಮತ್ತು ಈಗಿನ ಪ್ರತಿಭಾವಂತ ವಿದ್ಯಾರ್ಥಿಗಳು ಕಲಿಯದ ಕೋರ್ಸ ಇಲ್ಲದಾಗಿದೆ
ವಿಜ್ಞಾನ ವಿಭಾಗ ಮತ್ತು ಕಾಮರ್ಸ್ ವಿಭಾಗಕ್ಕೆ ಸೇರಬೇಕಾದರೆ ಆಲಮೇಲ ಪಟ್ಟಣದಿಂದ ಸುಮಾರು 25-30 ಕೀಲೋಮಿಟರ್ ದೂರ ಪ್ರಯಾಣ ಬೇಳಸಬೇಕಿದೆ ಆದರೆ ಅದು ಬಡಕುಟುಂಬಳಿಗೆ ಸಾಧ್ಯವಾಗುತ್ತಿಲ್ಲ ಮತ್ತು ಮಧ್ಯಮ ವರ್ಗದ ಹೆಣ್ಣು ಮಕ್ಕಳು ಇಲ್ಲಿಂದ ಸಿಂದಗಿ ಇಂಡಿಗೆ ಹೋಗಬೇಕಾದರೆ ದಿನಾಲು ಬಸ್ಸಿಗೆ ಹೋಗುವಂತಾಗುತ್ತದೆ ಆದರೆ ಮನೆಯಲ್ಲಿ ನೀನು ದಿನಾಲು ಬಸ್ಸಿಗೆ ಹೋಗೋದು ಬೇಡ ಇಲ್ಲೆ ಕಲಾ ವಿಭಾಗದಲ್ಲಿ ಶಿಕ್ಷಣ ಪಡೆಯಬೇಕಾದ ಪರಸ್ಥಿತಿ ಬಂದೋದಗಿದೆ.
ಇಲ್ಲಿ ಕಾಲೆಜು ಪ್ರಾರಂಬಿಸಿಲು ಸ್ಥಳ ಅವಕಾಶಕ್ಕೆ ಏನು ಕೋರತೆ ಇಲ್ಲ ಇಲ್ಲಿನ ಸರಕಾರಿ ಹೆಣ್ಣು ಮಕ್ಕಳ ಹೋಸ ಕಟ್ಟಡವಿದೆ ಮತ್ತು ಈಗ ಸರಕಾರಿ ಹೆಣ್ಣು ಮಕ್ಕಳ ಕಟ್ಟಡ ಖಾಲಿ ಒಂದಿದೆ ಮತ್ತು 15-20 ರೂಮಗಳ್ ಸರಕಾರಿ ಗಂಡು ಮಕ್ಕಳ ಶಾಲೆ ಇದೆ ಇವು ಬೇಡವಾದರೆ ಯುಕೆಪಿ ಕ್ಯಾಂಪನಲ್ಲಿ ಖಾಲಿ ಬಿದ್ದಿರುವ ಕಟ್ಟಡಗಳು ಅವನ್ನು ಬಳಸಿ ಅದರಲ್ಲಿ ಪಿಯುಸಿ ಮತ್ತು ಡಿಗ್ರಿ ಕಾಲೇಜುಗಳು ಪ್ರಾರಂಬಿಸಬಹುದು ಸಂಬಂದ ಪಟ್ಟ ಅಧಿಕಾರಿಗಳು ಇತ್ತಕಡೆ ಗಮನ ಹರಿಸಬೇಕದೆ ಆದಷ್ಟು ಬೇಗ ಇದೇ 2023-24ನೇ ಶೈಕ್ಷಣಿಕ ವರ್ಷದಿಂದ ಪಿಯುಸಿ ಡಿಗ್ರಿ ಕಾಲೇಜುಗಳು ಆರಂಬಿಸಬೇಕು.
ನಾನು ಈ ಸಲ್ 10ನೇ ತರಗತಿ ಮುಗಿಸಿದ್ದು ನಾನು ವಿಜ್ಞಾನ ವಿಭಾಕ್ಕೆ ಹೋಗಬೇಕು ಆದರೆ ನಾನು ಕಲಿಯ ಬೇಕಾದರೆ ಸಿಂದಗಿಗೆ ಹೋಗಬೇಕು ನಮ್ಮ ಮನೆಯಲ್ಲಿ ಇಲ್ಲಿಂದ ದಿನಾ ಹೋಗೋದು ಬರೋದು ಆಗುತ್ತೆ ಬೇಡ ನಮ್ಮ ಊರಲ್ಲಿ ಯಾವ ಕಾಲೇಜ ಇದೆ ಅದೇ ಮಾಡು ಅಂತಾರೆ ಹಾಗಾದರೆ ತಾಲೂಕು ಆಗಿದ್ದಕೆ ಉಪಯೋಗ ಎನಾಯಿತು ಆದಷ್ಟು ಬೇಗ ಎಲ್ಲಾ ವಿಭಾಗದ ಸರಕಾರಿ ಕಾಲೇಜು ಪ್ರಾರಂಭ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೆನೆ.- ವಿಜಯಕುಮಾರ ಚಿಂದೆ
ನಾನು ಪಿಯುಸಿ ಕಾಮಸಶ ಸಿಂದಗಿಯಲ್ಲಿ ಮುಗಿಸಿದ್ದೆನ ನಾನು ಬಡವ ನಾನು ಪಾರ್ಟ ಟೈಂ ಜಾಬ್ ಮಾಡಕೋಂತ್ ಬಿ.ಕಾಮ್ ಮಾಡಬೇಕು ಅನ್ನಕೊಂಡಿನಿ ಆದರೆ ನಾನು ಇಲ್ಲಿಂದ ಸಿಂದಗಿ ಹೋಗಿ ಬರೋದೆ ಸಂಜಿ ಆತಾದ ಯಾವಗ ಕೇಲಸಕ್ಕ ಹೋಗುದು ಯಾವಾಗ ಕಾಲೇಜ್ ಕಲಿಯೋದು ಎನರೆ ಮಾಡಿ ಒಂದು ಡಿಗ್ರಿ ಕಾಲೆಜ್ ಚಾಲುಮಾಡರಿ -ಅಭಿಷೇಕ ರಜಪೂತ