
ಆಲಮೇಲ:ಎ.21:ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಬೆಳವಣಗೆ ಭವಿಷ್ಯದಹಿತ ಕಾಪಾಡಿಕೊಳ್ಳಬೇಕಾದರೆ ಕಡ್ಡಯವಾಗಿ ಮತದಾನ ಮಾಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪಟ್ಟಣ ಪಂಚಾಯತಿಯ ಮುಖ್ಯಾಧಿಖಾರಿ ಜಿ.ವಿ.ಹಣ್ಣಕೇರಿ ಹೇಳಿದರು.
ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ ವಿಜಯಪುರ ಪಟ್ಟಣ ಪಂಚಾಯತ ಆಲಮೇಲ ಹಾಗೂ ಆಲಮೇಲದ ವಿಕಲಚೇತನರ ಕಲ್ಯಾಣ ಸಂಘ ದಿಂದ ಮತದಾನ ಜಾಗೃತಿಯಲ್ಲಿ ಮಾತನಾಡಿದ್ದರು
ಪಟ್ಟಣ ಪಂಚಾಯತ ಕಾರ್ಯಲಯದಿಂದ ಬಜಾರ್ ಮೇನ್ ರೋಡ ಮೂಲಕ ಡಾ.ಅಂಬೇಡ್ಕರ ವೃತ್ತ ದಿಂದ ಹಳೆ ಕರ್ನಾಟಕ ರಸ್ತೆ ಮುಖಾಂತ ವಿಕಲಚೇತನರಿಂದ ತ್ರಿಚಕ್ರ ವಾಹನದ ಮೂಲಕ ಮತದಾರರ ಜಾಗೃತಿ ಮೂಡಿಸಿದ್ದರು
ಈ ವರ್ಷದಿಂದ ಪ್ರಾರಂಭವಾಗಿರುವ ಮನೆಯಿಂದಲೆ ಮತದಾನದ ಆಲಮೇಲ ಪಟ್ಟಣದಲ್ಲಿ 303 ಜನ ಮತದಾನ ಮಾಡಲಿದ್ದಾರೆ ಇದ್ದರಲ್ಲಿ 210ಜನ ವಯಸ್ಕರು ಮತ್ತು 93ಜನ ಅಂಗವಿಕಲರಿದ್ದಾರೆ ಎಂದು ಪ.ಪಂ ಮುಖ್ಯಾಧಿಕಾರಿ ಹೇಳಿದ್ದಾರೆ.
ಪಟ್ಟಣ ಪಂಚಾತಿಯ ಅಧಿಕಾರಿಗಳಾದ ಬೋಜು ನಾರಾಯಣಕರ ಲಾಲ ದೇವರಮನಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಆಂಗವಿಕಲರಾದ ಅಪ್ಪಣ್ಣ ಅಂಬೋರೆ ಅಕ್ಬರ ಮುದಕಪ್ಪ ಕುಂಬಾರ ಕಾಜಪ್ಪ ಇನ್ನಿತರರು ಇದ್ದರು