ಆಲಮೇಲದಲ್ಲಿ ಗಣಪತಿ ಮೂರ್ತಿ ಅದ್ದೂರಿ ಮೆರವಣಿಗೆ

ಆಲಮೇಲ :ಸೆ.26: ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಉತ್ಸವ ಪಟ್ಟಣದಲ್ಲಿ ಭಾವೈಕ್ಯತೆಯಿಂದ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ವಿವಿಧ ಚೌಕಿನಲ್ಲಿ ಗಣೇಶ ಮೂರ್ತಿಯನ್ನು ಹದಿನೈದು ಆಯಕಟ್ಟಿನ ಸ್ಥಳದಲ್ಲಿ ಗಣೇಶ ಮೂತಿಯನ್ನು ಪ್ರತಿಷ್ಠಾಪಿಸಿ, ಪ್ರತಿಯೊಂದು ಚೌಕಿನ ಸ್ತಬ್ದ ಚಿತ್ರಗಳನ್ನು ವಿಶೇಷ ಅಲಂಕಾರದೊಂದಿಗೆ ಶನಿವಾರ ಸಾಯಂಕಾಲ ಸಂಜೆ 8-00ರಿಂದ ಬೆಳಿಗ್ಗೆ 6-00ರವರೆಗೆ, ಗಣಪತಿ ಮೂರ್ತಿ ಹಾಗೂ ಸ್ತಬ್ದ ಚಿತ್ರಗಳು, ಯುವಕರ ವಿವಿಧ ಕೋಲಾಟಗಳು, ಹಾಡಿನೊಂದಿಗೆ ಮನರಂಜಿಸಿದವು, ಸಹಸ್ರಾರು ಜನರು ಉತ್ಸವದಲ್ಲಿ ಭಾಗಿಯಾಗಿ, ವಿಘ್ನೇಶ್ವರನಿಗೆ ವಿಧೇಯ ಹೇಳಿ ವಿಸರ್ಜಿಸಿದರು. ಗಣೇಶೋತ್ಸವದ ಮಹಾಮಂಡಳದ ಅಧ್ಯಕ್ಷ ಮೈಬೂಬು ಮಸಳಿ ಅವರ ನೇತೃತ್ವದಲ್ಲಿ ಆಚರಿಸಿದರು.
ಈ ಸಂದರ್ಭದಲ್ಲಿ ಪೂಜ್ಯರಾದ ಡಾ. ಸಂದೀಪ್ ಪಾಟೀಲ್, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರರವರು, ಡಿ.ಎಸ್.ಪಿ ಇಂಡಿ, ಸಿ.ಪಿ.ಐ ಸಿಂದಗಿ,ಮುಖಂಡರಾದ ರಮೇಶ ಬಂಟನೂರು, ಅಶೋಕ ಕೊಳಾರಿ, ಸಾಧಿಕ್ ಸುಂಬಡ, ಅಯೂಬ್ ದೇವರಮನಿ, ಬಸವರಾಜ ಹೂಗಾರ, ಶ್ರೀಮಂತ ದುದ್ದಗಿ, ಅಪ್ಪು ಶೆಟ್ಟಿ, ಶ್ರೀಶೈಲ ಮಠಪತಿ,ರವಿ ಬಡದಾಳ, ದೇವಪ್ಪ ಗುಣಾರಿ, ಗಂಗಾಧರ ಬೋವಿ, ಗ್ರಾಮದ ವಿವಿಧ ಗಣ್ಯರು, ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಗಣೇಶನ ವೈಭವವನ್ನು ನೋಡಿ ಕಣ್ಣು ತುಂಬಿಕೊಂಡರು. ಸ್ಥಳೀಯ ಪಿ.ಎಸ್.ಐ ಕುಮಾರ್ ಹಾಡಕರ್, ಸಿಬ್ಬಂದಿಯೊಂದಿಗೆ ಸೂಕ್ತವಾದ ಬಂಧೋಬಸ್ತನ್ನು ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸಿದರು.