ಆಲಮೇಲದಲ್ಲಿ ಎಸ್.ಬಿ.ಐ. ಶಾಖೆ ಆರಂಭ

ಆಲಮೇಲ :ಫೆ.17: ಪಟ್ಟಣದ ಜನರ ಬೇಡಿಕೆ ಸುಮಾರು ದಶಕಗಳ ಕಾಲದಿಂದ ಎಸ್.ಬಿ.ಐ ಮಹಾ ಪ್ರಬಂಧಕರು ಬೆಂಗಳೂರು ಇವರಿಗೆ ಇಲ್ಲಿನ ಹೋರಾಟಗಾರರಾದ ಪಿ.ಟಿ.ಪಾಟೀಲ್, ಜಿ.ಬಿ.ಮುಂಡೆವಾಡೇರವರ ಶ್ರಮದಿಂದ ಆಲಮೇಲ ಪಟ್ಟಣದಲ್ಲಿ ಎಸ್. ಬಿ.ಐ ಶಾಖೆ ಪೂಜಾಕೈಂಕರ್ಯಗಳೊಂದಿಗೆ ಪ್ರಾರಂಭವಾಗಿದ್ದು, ತಾಲೂಕಿನ ಸುತ್ತಮುತ್ತಲಿನ ನೀರಾವರಿ ಭೂ ಪ್ರದೇಶದ ಹೊಂದಿದ್ದು ದಾಖಲೆಯೊಂದಿಗೆ ಗಮನಹರಿಸಿದ್ದು, ಇಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳಿದ್ದು ,ಆಲಮೇಲ ನೂತನ ತಾಲ್ಲೂಕಾಗಿದ್ದು , ನಿಮ್ಮ ಶಾಖೆಯನ್ನು ಪ್ರಾರಂಭಿಸಲು ಮನವಿ ಮಾಡಿದ್ದು , ಮನವಿಗೆ ಸ್ಪಂದಿಸಿ ಬೆಂಗಳೂರಿನ ಮಹಾಪ್ರಬಂಧಕರಾದ ಚೀಫ್ ಜನರಲ್ ಮ್ಯಾನೇಜರ್ ಕೃಷ್ಣಶರ್ಮನವರು ದಿನಾಂಕ-14ರಂದು 5047ನೇ ಶಾಖೆಯನ್ನು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಐದು ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಿ ಅದರ ಪ್ರತಿಯನ್ನು ನೀಡಿದರು, ಸುಮಾರು 11 ಖಾತೆಗಳನ್ನು ತೆರೆದು, ಫಲಾನುಭವಿಗಳಿಗೆ ನೀಡಿದರು.
ಸ್ಥಳ : ಸಿಂದಗಿ ರಸ್ತೆ, ಮಸಲಾ ಕಾಂಪ್ಲೆಕ್ಸ, ಆಲಮೇಲ. ಆರಂಭಿಸಿದ್ದು ಬಳಿಕ ಜನರಲ್ ಮ್ಯಾನೇಜರ್ ವಿ.ಎನ್. ಶರ್ಮ ಮಾತನಾಡಿ ಆಲಮೇಲ ತಾಲ್ಲೂಕಿನ 44 ಗ್ರಾಮಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಿಂದ ಇಲಲಿನ ಎಲ್ಲಾ ರೈತಾಪಿಗಳು, ವ್ಯಾಪಾರಸ್ಥರು, ಕಾರ್ಮಿಕರು, ಮಹಿಳೆಯರು, ಬ್ಯಾಂಕಿನಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಪಡೆಯಿರಿ, ಗ್ರಾಹಕರಿಗೆ ಉತ್ತಮವಾದ ಸೇವೆ ಒದಗಿಸುತ್ತೇವೆ, ನಿಮ್ಮೆಲ್ಲರ ಸಹಕಾರ ಆರ್ಶೀವಾದ ಇರಲಿ ಎಂದರು.
ಈ ಸಂದರ್ಭದಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಪಿ, ಎಲ್, ಶ್ರೀನಿವಾಸರಾವ್, ಗಿರೀಶ ಕುಮಾರ್, ಶ್ರೀನಿಧಿ ಗುಮತೆ, ವ್ಯಾಪಾರಿ ಸಂಘದ ಅಧ್ಯಕ್ಷ ದೇವಪ್ಪ ಗುಣಾರಿ, ನಜರೂದ್ದೀನ್ ಮಸಾಲೆ, ಶಿವಾಜಿ ನಾರಾಯಣಕರ್, ಮಾರುತಿ ನಾರಾಯಣಕರ, ಇಲ್ಲಿನ ಗ್ರಾಮಸ್ಥರು, ರೈತರು, ವ್ಯಾಪಾರಸ್ಥರು ಭಾಗವಹಿಸಿದ್ದರು.