ಆಲಮೇಲದಲ್ಲಿ ಅದ್ಧೂರಿ ಮೆರವಣಿಗೆ : ಡಾ. ಬಾಬಾಸಾಹೇಬ ಅಂಬೇಡ್ಕರರ್ 132ನೇ ಜಯಂತಿ ಆಚರಣೆ

ಆಲಮೇಲ:ಎ.15:ಕಂಪ್ಯೂಟರ್ ಯುಗದಲ್ಲಿ ಇಂದಿನ ಯುವ ಪೀಳಿಗೆಗಳು ದುಷ್ಚಟಗಳಿಂದ ದೂರವಾಗಿ, ಶಿಕ್ಷಣದ ಕಡೆ ಹೆಚ್ಚು ಒಲವು ತೋರಬೇಕು, ಅದಕ್ಕಾಗಿ ಪಾಲಕ, ಪೊಷಕರು ಮಕ್ಕಳಿಗೆ ಸರಿಯಾದ ಶಿಕ್ಷಣ ನಿಡಿ, ಬಾಬಾಸಾಹೇಬ ಅಂಬೇಡ್ಕರರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ನಡೆಸುವಂತೆ ತಿಳವಳಿಕೆ ನಿಡಬೇಕು, ಅಂದಾಗ ಮಾತ್ರ ಅವರ ಕನಸ್ಸು ನನಸಾಗುತ್ತವೆ ಎಂದು ದಲಿತ ಮುಖಂಡ ಹರೀಶ ಯಂಟಮಾನ .ಹೆಳಿದರು.

ಪಟ್ಟಣದ ಬಸ್ ನಿಲ್ದಾಣ ಎದುರಿನ ಡಾ/ ಬಾಬಾಸಾಹೇಬ ಅಂಬೇಡ್ಕರ ವೃತ್ತದಲ್ಲಿ ಅಂಬೇಡ್ಕರರ 132ನೇ ಜಯಂತೋತ್ಸವದ ಅಂಗವಾಗಿ ವಿವಿಧ ದಲಿತ ಪರ ಸಂಘಟನೆಗಳು ಎರ್ಪಡಿಸಿದ ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು

ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾಸಾಹೇಬ ಅಂಬೇಡ್ಕರರು.ಅವರ ಬದುಕು ಎಲ್ಲರಿಗೂ ಸ್ಪೂರ್ತಿ.ಸಮಾನತೆ.ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮಹೆಮ್ಮೆಯ ಸಂವಿದಾನ ಶಿಲ್ಪಿ .ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ ದೀಪ.ಇವರ ಚಿಂತನೆಗಳು ಇಂದಿಗೂ ಯು ಜನತೆಗೆ ಸ್ಪೂರ್ತಿ ನೀಡುತ್ತಲೇ ಇವೆ.ಅದಕ್ಕಾಗಿ ನಾವೆಲ್ಲರೂ ನಮ್ಮ ನಿತ್ಯ್ದ ಜೀವನದಲ್ಲಿ ಅವರ ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ನಡೆದರೆ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮದ ಸಾನಿಧ್ಯ ದೇವರಗುಡ್ಡದ ಒಡೆಯರಾದ ಡಾ/ಸಂದೀಪ ಪಾಟೀಲ ವಹಿಸಿದರು. ಅಧ್ಯಕ್ಷತೆ ಸಮಾಜದ ಮುಖಂಡ ಜಗದೀಶ ಧಾಳಿ.ಮುಖ್ಯ ಅತಿಥಿಗಳಾಗಿ ಡಾ/ರಾಜೇಶ ಪಾಟೀಲ.ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವಕುಮಾರ ಗುಂದಗಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಯೂಬ ದೇವರಮನಿ, ಗುಂಡು ಮೇಲಿನಮನಿ. ಶಿವಾನಂದ ಜಗತಿ, ಪಪಂ ಸದಸ್ಯರಾದ ಡಾ/ಸಂಜೀವಕುಮಾರ ಯಂಟಮಾನ, ಮುಖಂರಾದ ಭೀಮಶಾ ಬಮ್ಮನಹಳ್ಳಿ. ಪ್ರಭು ವಾಲಿಕಾರ, ಜೈಭೀಮ ನಾಯ್ಕೋಡಿ, ಶ್ರೀಶೈಲ ಭೋವಿ ಇದ್ದರು.

ವೇದಿಕೆಯ ಕಾರ್ಯಕ್ರಮದ ಪೂರ್ವದಲ್ಲಿ ಅಂಬೇಡ್ಕರ ನಗರದಿಂದ ಡಾ/ಬಾಬಾಸಾಹೇಬರ ಭಾವಚಿತ್ರದ ಭವ್ಯ ಮೇರವಣಿಗೆ ಮೂಲಕ ಬಸ್ ನಿಲ್ದಾಣದ ಎದುರಿನ ಅಂಬೇಡ್ಕರ ವೃತ್ತಕ್ಕೆ ಆಗಮಿಸಿ ಬಸವೇಶ್ವರ ಹಾಗೂ ಟಿಪ್ಪು ಸುಲ್ತಾನ ವೃತ್ತಕ್ಕೆ.ಹೂಮಾಲೆ ಅರ್ಪಿಸಿ ಧ್ವಜಾರೋಹಣ ಕಾರ್ಯಕ್ರಮ ನೇರವೇರಿಸಿ ನಂತರ ಡಾ/ಅಂಬೇಡ್ಕರರ ಮೂರ್ತಿಗೆ ಪೂಜೆ ಸಲ್ಲಿಸಿದರು.