ಆಲಮೇಲಕ್ಕೆ ತೋಟಗಾರಿಕೆ ಕಾಲೇಜು : ಗ್ರಾಮಸ್ಥರಿಂದ ಪಟ್ಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮ ಆಚರಣೆ

ಆಲಮೇಲ:ಫೆ.17:ಪಟ್ಟಣದಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸುವದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಈ ಭಾಗದ ಜನರಲ್ಲಿ ಹರ್ಷ ತುಂಬಿದೆ.
ಶುಕ್ರವಾರ ಕಾಂಗ್ರೇಸ್ ಮುಖಂಡ ರಮೇಶ ಬಂಟನೂರ, ಪಟ್ಟಣ ಪಂಚಾಯತಿ ಸದಸ್ಯ ಅಶೋಕಗೌಡ ಕೊಳಾರಿ ನೇತೃತ್ವದಲ್ಲಿ ಬಸ್ ನಿಲ್ದಾಣದ ಹತ್ತಿರ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಹಾಗೂ ಆಲಮೇಲ ನಾಗರಿಕರು ವಿಜಯೋತ್ಸವ ಆಚರಿಸಿದರು. ಶಾಸಕ ಅಶೋಕ ಮನಗೂಳಿಯವರ ಸತತ ಪ್ರಯತ್ನದ ಫಲವಾಗಿ ಇಂದು ತಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳು ಇಡೇರಿಸಿದ್ದಕ್ಕೆ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಮೇಶ ಬಂಟನೂರ ‘ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಶಾಸಕರು ಇಡೇರಿಸಿದ್ದಾರೆ, ಆಲಮೇಲದ ಜನತೆ ಅವರಿಗೆ ಆಭಾರಿಯಾಗಿದೆ ಎಂದರು. ಪ್ರಭು ವಾಲಿಕಾರ, ಬಾಬು ಕೊತಂಬರಿ, ವಾಹಬ್ ಸುಂಬಡ, ಸಂತೋಷ ಜರಕರ್, ಬೀಮು ಬಮ್ಮನಳ್ಳಿ, ಬಶೀರ ತಾಂಬೋಳಿ, ಪುಂಡಲೀಕ ದೊಡಮನಿ, ಸಂತೋಷ ಮೇಲಿನಮನಿ,ನಜೀರ ಆಲಗೂರ, ದಯಾನಂದ ನಾರಯಣಕರ, ಮುನ್ನಾ ಚೌಧರಿ, ಚಾಂದಸಾಬ ವಡಗೇರಿ ನಾಶೀರ ದೇವರಮನಿ, ಮೊದಲಾದವರು ಭಾಗವಹಿಸಿದ್ದರು