ಆಲಮಟ್ಟಿ ಅಣೆಕಟ್ಟೆ ನೀರು ಜಿಂದಾಲ್ ಫ್ಯಾಕ್ಟರಿಗೆ ಬಿಡುವುದನ್ನು ವಿರೋಧಿಸಿ ರೈತರ ಪ್ರತಿಭಟನೆಆಲಮಟ್ಟಿ ಅಣೆಕಟ್ಟೆ ಎತ್ತರಕ್ಕೆ ರೈತರ ಆಗ್ರಹ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.29:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಂದಾಲ್ ಫ್ಯಾಕ್ಟರಿಗೆ ಬಿಡುತ್ತಿರುವ ನೀರನ್ನು ಕೂಡಲೇ ಸ್ಥಗಿತಗೊಳಿಸಿ ಕೆರೆ ಹಾಗೂ ಜನಜಾನುವಾರುಗಳಿಗೆ ನೀರನ್ನು ಬಿಡಬೇಕು. ಕೃಷ್ಣಾನದಿ ಆಲಮಟ್ಟಿ ಜಲಾಶಯದ ಆಣೆಕಟ್ಟು ಎತ್ತರ 519 ರಿಂದ 524.256 ಮೀಟರ್‍ಗೆ ಎತ್ತರಿಸಬೇಕು. ರಾಜ್ಯದ್ಯಂತ 186 ತಾಲೂಕುಗಳನ್ನು ಬರಗಾಲ ಎಂದು ಸರಕಾರವು ಘೋಷಿಸಿದ್ದು ಕೇಂದ್ರ ಸರಕಾರವು ಬರ ಪರಿಹಾರ ಹಣವನ್ನು ಬಿಡುಗಡೆಗೊಳಿಸುವುದು ಇವೇ ಮುಂತಾದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ಅನಂತರ ರೈತರು ಅಂಬೇಡ್ಕರ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಜಿಲ್ಲಾಧ್ಯಕ್ಷ ವಿಜಯವಿಠ್ಠಲ ಪೂಜಾರ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಸರಕಾರವು 186 ತಾಲೂಕುಗಳನ್ನು ಬರ ಎಂದು ಘೋಷಿಸಿ ಸುಮಾರು 4 ರಿಂದ 5 ತಿಂಗಳು ಗತಿಸಿದರೂ ಕೂಡಾ ಯಾವೊಬ್ಬ ರೈತರ ಖಾತೆಗೆ ಬರ ಪರಿಹಾರ ವಿತರಣೆಯಾಗಿಲ್ಲ. ಬೆಳೆ ವಿಮೆ, ಬೆಳೆ ಪರಿಹಾರ ಬಿಡುಗಡೆಗೊಳಿಸುತ್ತಿಲ್ಲ. ರಾಜ್ಯ ಸರಕಾರದ ವಿರುದ್ಧ ಈಗಾಗಲೇ ಸುಮಾರು ಹೋರಾಟಗಳನ್ನು ಮಾಡಿದ್ದು ಈ ಸರಕಾರವು ಹಣ ಬಿಡುಗಡೆಗೊಳಿಸಿಲ್ಲ ಎಂದು ಹೇಳುತ್ತಿದ್ದು, ಅದೇ ರೀತಿ ರಾಜ್ಯದ ಸರಿ ಸುಮಾರು ನದಿಗಳಾದ ಮೇಕೆದಾಟು, ಭದ್ರ ಮೇಲ್ದಂಡೆ ಯೋಜನೆ. ಆಲಮಟ್ಟಿ ಯೋಜನೆ, ತುಂಗಭದ್ರ ನದಿಗೆ ಹೂಳು ತುಂಬ ಸಮಾನಾಂತರ ಜಲಾಶಯಕ್ಕಾಗಿ ನವಿಲಿಯ ಹತ್ತಿರ ಸರಕಾರ ಈಗಾಗಲೇ ಬಜೆಟ್ ಅಧಿವೇಶನದಲ್ಲಿ 15,600 ಕೊಟಿï ಯೋಜನೆಯ ವೆಚ್ಚವನ್ನು ನಿಗದಿಗೊಳಿಸಿದ್ದು ಈ ಎಲ್ಲಾ ನದಿಗಳ ರಾಷ್ಟ್ರೀಯ ಯೋಜನೆಯ ಘೋಷಣೆಯನ್ನು ಕೇಂದ್ರ ಸರಕಾರ ಮಾಡಲು ಒತ್ತಾಯಿಸಿದರು.
ರಾಜ್ಯಾದ್ಯಾಂತ 186 ತಾಲೂಕುಗಳನ್ನು ಬರಗಾಲ ಎಂದು ಸರಕಾರವು ಘೋಷಿಸಿದ್ದು ಕೇಂದ್ರ ಸರಕಾರವು ಬರ ಪರಿಹಾರ ಹಣವನ್ನು ಬಿಡುಗಡೆಗೊಳಿಸಬೇಕು.ಕೇಂದ್ರ ಸರಕಾರವು ಈಗಾಗಲೇ ಪಂಜಾಬ, ಹರಿಯಾಣ, ದೇಶದ ಇನ್ನಿತರ ರಾಜ್ಯಗಳಿಂದ ಡಾ.ಸ್ವಾಮಿನಾಥನ ವರದಿ ಜಾರಿಗೊಳಿಸಲು ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ತಕ್ಷಣವೇ ಕಾನೂನಾತ್ಮಕ ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಬಸವರಾಜ ಬಾಗೇವಾಡಿ ಮಾತನಾಡಿ, ಆಲಮಟ್ಟಿ ಅಣೆಕಟ್ಟಿನ ಸಂತಸ್ತರಿಗೆ ಉದ್ಯೋಗ ನೀಡಬೇಕು. ರಾಷ್ಟ್ರೀಯ ಹೆದ್ದಾರಿ 50ಕ್ಕೆ ರೈತರು ಕಳೆದುಕೊಂಡ ಜಮೀನಿಗೆ ಭೂ ಪರಿಹಾರ 13 ವರ್ಷ ಕಳೆದರೂ ನೀಡದೆ ಇರುವುದು ಖಂಡನೀಯ. ಬೇಗನೆ ಪರಿಶೀಲಿಸಿ ಪರಿಹಾರವನ್ನು ನೀಡಬೇಕು. ಸಂಪೂರ್ಣ ಸಾಲಮನ್ನಾ ಮಾಡಬೇಕು. ರೈತ ಮಹಿಳೆ ಸ್ವ ಸಹಾಯ ಗುಂಪುಗಳಿಗೆ ಹೆಚ್ಚಿನ ಸಹಾಯಧನ ಬಿಡುಗಡೆ ಮಾಡಬೇಕು. ಸ್ತ್ರೀಶಕ್ತಿ ಗುಂಪುಗಳ ಸಾಲ ಮನ್ನಾ ಮಾಡಬೇಕು. ರೈತ ಬಡ ಮಹಿಳೆಯರಿಗೆ ವಸತಿ ಸೌಲಭ್ಯ ಒದಗಿಸಬೇಕು, ರೈತ ಮಹಿಳೆಯರಿಗೆ ಉದ್ಯೋಗ ಮಾಡಲು ಬಡ್ಡಿ ರಹಿತ ಸಾಲ ವಿತರಣೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಗಣ್ಣ ಬಾಗೇವಾಡಿ, ಶಾರದಾ ಕಾಳಮ್ಮನವರ, ಶಾಂತಪ್ಪ ಅಬಕಾರಿ, ಸಿದ್ದಪ್ಪ ಪೂಜಾರಿ, ಸುಜಾತಾ ವಡ್ಡರ, ಸುನೀತಾ ರಾಠೋಡ, ರಮೇಶ ಪ್ಯಾಟಿ, ಸಿದ್ದಪ್ಪ ಬಳೂತಿ, ನಿಂಗಮ್ಮ ಬಿರಾದಾರ, ನಾಗಮ್ಮ ಬಿರಾದಾರ, ಶಾಂತಾಬಾಯಿ ಬಿರಾದಾರ, ಲಕ್ಕುಬಾಯಿ ಹುಬ್ಬಳ್ಳಿ, ನೀಲಮ್ಮ ಹುಬ್ಬಳ್ಳಿ, ಯಮನವ್ವ ಕೇಸಾಪುರ, ಬರಬಸಮ್ಮ ಢವಳÀಗಿ, ಈರಪ್ಪ ಅಗಸಿನಾಳ, ರಾಜಶ್ರೀ ಬಳೂತಿ, ಪಾರ್ವತಿ ಹಿರೇಮಠ, ಲಕ್ಷ್ಮಿಬಾಯಿ ಮಾದಿಹಾಳ, ಶಾಂತಾಬಾಯಿ ಅಲಕೋಡ ಮತ್ತಿತರರು ಉಪಸ್ಥಿತರಿದ್ದರು.