ಆಲಂಗಾರಿನಲ್ಲಿ ೧೦೪ ಮಂದಿಗೆ ಉಚಿತ ಕೋವಿಡ್-೧೯ ಲಸಿಕೆ

ಮೂಡುಬಿದಿರೆ, ಮೇ.೧- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳುವಾಯಿ, ರೋಟರಿ ಕ್ಲಬ್ ಮೂಡುಬಿದಿರೆ ಮಿಡ್‌ಟೌನ್ ಮೂಡುಬಿದಿರೆ ಇವುಗಳ ಸಹಯೋಗದೊಂದಿಗೆ ಆಲಂಗಾರಿನ ನಿಧಿ ಪ್ಯಾಲೇಸ್‌ನಲ್ಲಿ ಉಚಿತ ಕೋವಿಡ್-೧೯ ಲಸಿಕಾ ಕಾರ್ಯಕ್ರಮ ಶುಕ್ರವಾರ ನಡೆಯಿತು.
ರೋಟರಿ ಕ್ಲಬ್ ಮೂಡುಬಿದಿರೆ ಮಿಡ್‌ಟೌನ್ ಮಾಜಿ ಅಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ ಅವರ ಮುಂದಾಳುತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ೧೦೪ ಮಂದಿ ಲಸಿಕೆಯನ್ನು ಪಡೆದುಕೊಂಡರು.
ರೋಟರಿ ಅಧ್ಯಕ್ಷ ಸುಶಾಂತ್ ಕರ್ಕೇರಾ, ಪಂಚಾಯತ್ ಸದಸ್ಯ ಭರತ್, ಎಂ.ಕೆ.ಶೆಟ್ಟಿ ಸೆಂಟ್ರಲ್ ಸೆಲೆಬಸ್ ಸ್ಕೂಲ್‌ನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ವಿಶ್ವಾಸ್ ಜೈನ್ ಮತ್ತಿತರರು ಈ ಸಂದರ್ಭದಲ್ಲಿದ್ದರು.