
(ಸಂಜೆವಾಣಿ ವಾರ್ತೆ)
ವಿಜಯಪುರ :ಆ.7: ನಗರದ ಡಾ,ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದೇವರ ಹಿಪ್ಪರಗಿ ಸರಕಾರಿ ಪ್ರಥಮ ದಜೆ9 ಕಾಲೇಜು ಆಶ್ರಯದಲ್ಲಿ ನಡೆಯುತ್ತಿರುವ ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಮೇಘಾ ಸ್ಪರ್ಧೆಯ 8 ನೇ ಅಂತರ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾನುವಾರ ಎರಡನೇ ದಿನವೂ ಕುಂದಾನಗರಿಯ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಗೆಲುವಿನ ಸವಿರುಚಿ ಮುಂದುವರಿಸಿದ್ದಾರೆ.
ರಾಚವಿವಿ ವ್ಯಾಪ್ತಿಯ ಸುಮಾರು120 ಕ್ಕೂ ಹೆಚ್ಚು ಪದವಿ ಕಾಲೇಜುಗಳ 1500 ಕ್ಕೂ ಅಧಿಕ ಕ್ರೀಡಾಪಟುಗಳು ಈ ಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮಆಟೋಟಗಳ ಕೌಶಲ್ಯ, ಕಸರತ್ತು ಅಂತಿಮ ಕ್ಷಣದವರೆಗೂ ಓರೆಗಲ್ಲಿಗೆ ಹಚ್ಚಿ ಜಯ ದಾಖಲಿಸುವ ತವಕದಲ್ಲಿದ್ದಾರೆ. ಪ್ರತಿಯೊಂದು ಸ್ಪರ್ಧೆಯಲ್ಲಿ ಗೆಲವುಗಾಗಿ ಕ್ರೀಡಾ ಅಂಗಳದಲ್ಲಿ ಕ್ರೀಡಾಪಟುಗಳು ಸ್ಪರ್ಧಾತ್ಮಕ ಹೋರಾಟ ನಡೆಸುತ್ತಿದ್ದಾರೆ, ಕೂಟದ ಪ್ರತಿ ಸ್ಪರ್ಧೆಯು ರೋಚಕ ಘಟ್ಟದಲ್ಲಿ ಕೊನೆಗೊಳ್ಳುತ್ತಲ್ಲಿದೆ. ಕ್ರೀಡಾ ಸಹಪಾಠಿಗಳು ತಮ್ಮ ಒಡನಾಡಿ ಸ್ಪಧಿ9 ಆಟದ ಅಂಕಣಕ್ಕಿಳಿದಾಗ ರೋಷ್ ಮತ್ತು ಜೋಶ್ ದಿಂದ ಸಿಳ್ಳೆ ಚಪ್ಪಾಳೆ ತಟ್ಟಿ ಹುರಿದುಂಬಿಸಿ ಕೇಕೆ ಹಾಕಿ ನಲಿದು ಕುಣಿಯುತ್ತಾರೆ. ಅತ್ಯಾಕರ್ಷಕ ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ಕೂಟ ಜರುಗುತ್ತಿದ್ದು, ಕ್ರೀಡಾಂಗಣದ ಮಧ್ಯೆ ಹಸಿರುಹುಲ್ಲು ಹಾಸಿಗೆ ಮುದ ನೀಡುತ್ತಲ್ಲಿದೆ. ಕೂಟದ ಪ್ರತಿಯೊಂದು ದೃಶ್ಯವು ದ್ರೋಣ ಕ್ಯಾಮರಾ ಎತ್ತರಕ್ಕೆ ಚಿಮ್ಮಿ ಸೆರೆ ಹಿಡಿಯುತ್ತಿದೆ. ಸ್ಪರ್ಧೆಗಳ ವೀಕ್ಷಕ ವಿವರಣೆಯಂತೂ ಹೃನ್ಮನ ತಣಿಸುವಂತಿದೆ. ಸಂಘಟನಾ ಕಾರ್ಯದರ್ಶಿ ಡಾ.ಅಶೋಕಕುಮಾರ ಜಾಧವ, ಪೆÇ್ರ, ರವಿ ಗೋಲಾ ಅವರ ಧ್ವನಿ ಸುರಳಿಗೆ ಕ್ರೀಡಾ ಅಭಿಮಾನಿ ಗಳು ಸಂಭ್ರಮಿಸುತ್ತಾರೆ. ಅಷ್ಟೊಂದು ಸೊಗಸಾಗಿ ಮೂಡಿಬರುತ್ತಿದೆ. ಈ ನಡುವೆ ಆಟಗಳು ಸಹ ತೀವ್ರ ಹಣಾಹಣಿಯ ಪೈಪೆÇೀಟಿಯಿಂದ ನಡೆಯುತ್ತಿದ್ದು ಕಣ್ಮನ ಸೆಳೆಯುವಂತಿವೆ.
ಭಾನುವಾರ ವಿಜೇತ ಕ್ರೀಡಾಪಟುಗಳಿಗೆ ಗಣ್ಯರನೇಕರು ಪ್ರಶಸ್ತಿ ಪತ್ರ, ಮೆಡಲ್ ನೀಡಿ ಗೌರವಪೂರ್ವಕವಾಗಿ ಪೆÇ್ರೀತ್ಸಾಹದ ಸಿಂಚನ ನೀಡಿದರು. ವಿಶೇಷ ಅತಿಥಿಗಳಾಗಿ,ಬಹುಮಾನ ವಿತಕರಾಗಿ ಲೋಕಾಯುಕ್ತ ಎಸ್.ಪಿ. ಅನಿತಾ ಹದ್ದನ್ನವರ, ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಸತ್ಯಕಾಮ ಕಟ್ಟಿ, ಉದ್ಯಮಿ ಜಾಕಿರ್ ಬಾಗವಾನ, ಮಾನಸ ಗಂಗೋತ್ರಿ ಸಂಸ್ಥೆಯ ಕಾರ್ಯದರ್ಶಿ ಕುಮಾರಗೌಡ ಹರನಾಳ, ರಾಕೇಶ ಕಲ್ಲೂರ್, ಪೆÇ್ರ,ಎಂ.ಬಿ.ರಜಪೂತ, ರಮ್ಶ ಮಸಿಬಿನಾಳ, ಪಪಂ ಸದಸ್ಯರು,ಸಮಾಜ ಸೇವಕ ಮುನ್ನಾ ಮಳಖೇಡ, ಶ್ರೀಮತಿ ಎ.ಬಿ.ನಾಯಕ ಇತರರು ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ಅತಿಥಿಗಳಾಗಿ ಕನಾ9ಟಕ ವಿಶ್ವ ವಿದ್ಯಾಲಯದ ಕ್ರೀಡಾಧಿಕಾರಿ ಡಾ,ಬಿ.ಎಂ.ಪಾಟೀಲ, ಎಸ್.ಎಸ್.ಕೋರಿ, ವ್ಹಿ.ಹೆಚ್.ಕಲಾದಗಿ, ವಿ.ಎಸ್.ಅಂಗಡಿ, ಅನೇಕರು ಉಪಸ್ಥಿತರಿದ್ದರು. ಆಯೋಜಕರಾದ ದೇವರ ಹಿಪ್ಪರಗಿ ಸರಕಾರಿ ಪ್ರಥಮ ದಜೆ9 ಕಾಲೇಜಿನ ಪ್ರಾಂಶುಪಾಲ ಪೆÇ್ರ, ಅಶೋಕ ಹೆಗಡೆ,ದೈಹಿಕ ಶಿಕ್ಷಣ ನಿದೇ9ಶಕ ಡಾ.ಅಶೋಕಕುಮಾರ ಜಾಧವ, ವಿನಾಯಕ ಗ್ರಾಮಪುರೋಹಿತ, ಜಿ.ಎಸ್.ಲೋಣಿ, ಫಯಾಜ್ ಕಲಾದಗಿ,ಸುರೇಶ್ ಬಿಜಾಪೂರ ಸೇರಿದಂತೆ ಹಲವಾರು ಕ್ರೀಡಾಧಿಕಾರಿಗಳು ಉಪಸ್ಥಿತರಿದ್ದರು.