ಆರ್.ವಿ.ಪಾಟೀಲರಿಗೆ ರಾಜ್ಯ ಮಟ್ಟದ ಜ್ಯೋತಿಬಾ ಫುಲೆ ಪ್ರಶಸ್ತಿ

ಇಂಡಿ :ಜ.19:ಇಂಡಿ ತಾಲೂಕಿನ ಹಿರೇಬೇವನೂರ ಕೇಶವನಗರ ತಾಂಡಾದ ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಆರ್.ವಿ.ಪಾಟೀಲರವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಘಟಕ ವಿಜಯಪುರ ಇವರಿಂದ ಶೈಕ್ಷಣಿಕ ಸಾಧನೆ ಹಾಗೂ ಸೇವಾ ಅನುಭವ ಗುರುತಿಸಿ ಜ್ಯೋತಿಬಾ ಫುಲೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆರ್.ವಿ.ಪಾಟೀಲ ರವರು ಇಂಡಿ ತಾಲೂಕಿನ ಕನ್ನಡ ಜಾನಪದ ಪರಿಷತ್ತ ಅಧ್ಯಕ್ಷರಾಗಿ, ಇಂಡಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಾಗಿ, ಇಂಡಿಯ ಬಸವರಾಜೇಂದ್ರ ಸತ್ಸಂಗ ಸಮಿತಿ ಕಾರ್ಯದರ್ಶಿಯಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಾಡಿಗೆ ಸಲ್ಲಿಸಿರುವ ಸಾಧನೆ ಕೊಡುಗೆಗಳನ್ನು ಒಳಗೊಂಡು ದಾಖಲೆ ವಿವರಗಳು ಪರಿಶೀಲನೆಗಳ ಪಡಿಸಿ ಸಮಿತಿಯ ಅಧ್ಯಕ್ಷರಾದ ಜಿ ಎಸ್ ಕಾಂಬಳೆ, ಕಾರ್ಯದರ್ಶಿಗಳು ರಮೇಶ ನಾಯಕ ಪದಾಧಿಕಾರಿಗಳ ಶಿಫಾರಸ್ಸಿನ ಪ್ರಕಾರ ಪ್ರಶಸ್ತಿ ಆಯ್ಕೆಯ ಸಮಿತಿ ಪಾಟೀಲ ಇವರ ಹೆಸರನ್ನು ಜ್ಯೋತಿಬಾ ಫುಲೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿಜಯಪುರದ ತೊರವಿಯಲ್ಲಿ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ ಜನವರಿ 21 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ .