ಆರ್.ವಿ.ಎಸ್. ಬ್ಲಾಸಂ ಸ್ಕೂಲ್ ನೂತನ ಶಾಲಾ ಕಟ್ಟಡ ಉದ್ಘಾಟಿಸಿದ ಸಚಿವರು

ಮಾನ್ವಿ.ಡಿ.೦೩- ಪಟ್ಟಣದಲ್ಲಿ ಆರ್.ವಿ.ಎಸ್. ಬ್ಲಾಸಂ ಸ್ಕೂಲ್ ನೂತನ ಶಾಲಾ ಕಟ್ಟಡವನ್ನು ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಿ ಮಾತನಾಡಿ, ಈ ಭಾಗದಲ್ಲಿ ಶೈಕ್ಷಣಿಕ ಪ್ರಗತಿಗೆ ಇಂತಹ ಸುಸಜ್ಜಿತವಾದ ಶಾಲೆಗಳು ಅಗತ್ಯವಾಗಿದ್ದು ಶಿಕ್ಷಣ ಸಂಸ್ಥೆಗಳವಾರು ತಾಲೂಕಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವುದಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ನಂತರ ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಚಾರ್ಯ ಮಹಾಸ್ವಾಮಿಗಳು ಆರ್ಶಿವಾಚನ ನೀಡಿ ಪಾಲಕರು ತಮ್ಮ ಮಕ್ಕಳಿಗೆ ಇಷ್ಟವಾದ ಶಿಕ್ಷಣವನ್ನು ನೀಡಿ ಪಾಲಕರು ಇಂದಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಬಲವಂತವಾಗಿ ಹೆಚ್ಚು ಅಂಕಗಳನ್ನು ಪಡೆಯುವಂತೆ ಒತ್ತಾಯಿಸುತ್ತಿರುವುದರಿಂದ ಅವರು ಮಾನಸಿಕ ಕುಗ್ಗಿಹೋಗುವ ಸಂಭವವಿರುವುದರಿಂದ ಅವರ ಮುಂದಿನ ಜೀವನದ ಮೇಲೆ ತೀವ್ರವಾದ ಪರಿಣಾಮಬಿರುತ್ತದೆ ಆದ್ದರಿಂದ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಪಾಲಕರಿಗೂ ಕೂಡ ಮಕ್ಕಳನ್ನು ಯಾವರೀತಿ ಬೆಳೆಸಬೇಕು ಎನ್ನುವ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಹಂಪಯ್ಯನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಾಂಧಿಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಆರ್.ತಿಮ್ಮಯ್ಯಶೆಟ್ಟಿ,ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಡಿ., ಆರ್.ವಿ.ಎಸ್. ಬ್ಲಾಸಂ ಸ್ಕೂಲ್‌ನ ಅಧ್ಯಕ್ಷರಾದ ಡಾ.ಆರ್.ಶ್ರೀಪಾದಶೇಟ್ಟಿ, ತಾಲೂಕು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹೆಚ್.ಶರ್ಪುದ್ದೀನ್ ಪೋತ್ನಾಳ್, ಕಟ್ಟಂ ಸತೀಶಕುಮಾರ,ಶಾಲೆಯ ಮುಖ್ಯಸ್ಥಾರು ಹಾಗೂ ಮುಕ್ಯಾಗುರುಗಳಾದ ಆರ್.ಪ್ರೀಯಾಂಕ, ಆರ್.ವೈಜನಾಥ, ಹಾಗೂ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಪಾಲಕರು ಇದ್ದರು.