ಆರ್ ವಿ ಎನ್ ನಿಧನ:ಗಣ್ಯರ ಸಂತಾಪ

ಕೆಂಭಾವಿ:ಫೆ.26: ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನಕ್ಕೆ ಪಟ್ಟಣದ ಪ್ರಮುಖರಾದ ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೆÇ.ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಲಿಂಗನಗೌಡ ಮಾಲಿ ಪಾಟೀಲ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ವಾಮನರಾವ ದೇಶಪಾಂಡೆ, ಜಿಲ್ಲಾ ರಾಜಕೀಯ ವೇದಿಕೆ ಅಧ್ಯಕ್ಷ ಸಂಜೀವರಾವ ಕುಲಕರ್ಣಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಚಿಂಚೋಳಿ,ಹಿರೇಮಠ ಸಂಸ್ಥಾನದ ಚನ್ನಬಸವ ಶಿವಾಚಾರ್ಯರು,ಕೆಂಭಾವಿ ಸಾಹಿತ್ಯ ಸಂಘ,ವಿವಿಧ ಪರ ಸಂಘಟನೆಗಳ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ.
ಇದೇ ವೇಳೆ ಅವರೊಂದಿಗಿನ ಒಡನಾಟ ಮತ್ತು ಪಟ್ಟಣದೊಂದಿಗೆ ಅವರಗಿದ್ದ ನಂಟಿನ ಬಗ್ಗೆ ವಾಮನರಾವ ದೇಶಪಾಂಡೆ ನೆನೆದು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.