ಆರ್.ರುದ್ರಯ್ಯರವರ ನೇತೃತ್ವದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

ಲಿಂಗಸುಗೂರು,ಮಾ.೧೫- ತಾಲೂಕಿನಲ್ಲಿ ಇಂದು ಕ್ಷೇತ್ರದ ಮಟ್ಟಮರಡಿ ದೊಡ್ಡಿ ಗ್ರಾಮದಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಆರ್.ರುದ್ರಯ್ಯರವರ ನೇತೃತ್ವದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಿ ಕಾಂಗ್ರೆಸ್ ಪಕ್ಷದ ಜನ ಜಾಗೃತಿ ಸಭೆ ನಡೆಸಲಾಯಿತು.
ನುಡಿದಂತೆ ನಡೆದ ಹಿಂದಿನ ಅವಧಿಯ ಕಾಂಗ್ರೆಸ್ ಸರ್ಕಾರ ಬಹುತೇಕ ಭರವಸೆ ಈಡೇರಿಸಿ ಕೊಟ್ಟ ಮಾತನ್ನು ಉಳಿಸಿಕೊಂಡಿತ್ತು. ಇದು ಕಾಂಗ್ರೆಸ್ ಪಕ್ಷದ ಹೆಗ್ಗಳಿಕೆ. ಅದೇ ರೀತಿ ಈ ಬಾರಿ ಕಾಂಗ್ರೆಸ್ ಗ್ಯಾರಂಟಿ ಅಂಶಗಳಾದ ೨೦೦ ಯುನಿಟ್ ಉಚಿತ ವಿದ್ಯುತ್, ಮನೆಯ ಹಿರಿಯ ಸದಸ್ಯೆಗೆ ೨,೦೦೦ ರೂ.ಗಳ ಮಾಸಾಶನ, ಪ್ರತಿ ವ್ಯಕ್ತಿಗೆ ತಿಂಗಳ ೧೦ ಕೆಜಿ ಉಚಿತ ಅಕ್ಕಿ ಸೇರಿದಂತೆ ಈಗಾಗಲೇ ಬಿಡುಗಡೆ ಮಾಡಿರುವ ಗ್ಯಾರಂಟಿ ಅಂಶಗಳು ಖಂಡಿತಾ ಜನರಲ್ಲಿ ಹೊಸ ಭರವಸೆ ಹುಟ್ಟಿಸಿದ್ದಂತೂ ಸುಳ್ಳಲ್ಲ. ಅದನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಕೂಡಾ. ಈ ನಿಟ್ಟಿನಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರುವಂತೆ ಮಾಡಬೇಕು ಎಂದು ನೆರೆದಿದ್ದ ಜನತೆಯಲ್ಲಿ ಮನವಿಯನ್ನು ಕ್ಷೇತ್ರದ ಕಾಂಗ್ರೆಸ್ ಮುಖಂಡ ಆರ್.ರುದ್ರಯ್ಯ ರವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅನೇಕ ಮುಖಂಡರು ಮಾತನಾಡಿ ಜನ ಜಾಗೃತಿ ಮೂಡಿಸಿದರು. ನಂತರ ಕ್ಷೇತ್ರದ ಸುತ್ತಮುತ್ತಲಿನ ದೊಡ್ಡಿಗಳಾದ, ಕಲ್ಲಾಳದೊಡ್ಡಿ, ಲಿಂಗದರದೊಡ್ಡಿ ಗಳಿಗೆ ತೆರಳಿ ಜನ ಜಾಗೃತಿಯೊಂದಿಗೆ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಆರ್.ಎಸ್.ನಾಡಗೌಡ ಕಾಳಪುರು, ಸಂಗಣ್ಣ ಮಾಸ್ಟರ್ ಬಯ್ಯಾಪುರು, ಎನ್.ಬಸವರಾಜ್, ಮಾ.ಜಿ.ಪಂ.ಸ.ಮಾಧವ್ ನೆಲೋಗಿ, ಸೋಮಣ್ಣ, ಶರಣಯ್ಯ ಹಿರೇಮಠ, ಬಸವನಗೌಡ ಪಾಟೀಲ್ ಕರಡ್ಕಲ್, ಪಿಡ್ಡಪ್ಪ ನಾಯಕ, ಶ್ರೀಶೈಲ ಅಂಗಡಿ, ದುರುಗಣ್ಣ ನಾಯಕ, ಮುಸ್ತಫಾ ಕುರೇಷಿ, ಈರಮ್ಮ ನಡಹಳ್ಳಿ ಮಠ, ನೀಲಮ್ಮ ಪಾಟೀಲ್, ಚನ್ನಬಸವ ನಾಯಕ, ಹಾಗೂ ಮಟ್ಟಮರಡಿದೊಡ್ಡಿ ಗ್ರಾಮದ ಸಾರ್ವಜನಿಕರು ಇದ್ದರು.