ಆರ್.ಬಿ.ವೈ.ಎಂ. ಕಾಲೇಜ್ ನಲ್ಲಿ ವಸತಿ ನಿಲಯಕ್ಕೆ ಭೂಮಿಪೂಜೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.31: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿಂದು ವಿದ್ಯಾರ್ಥಿನಿಯರ ನೂತನ ವಸತಿನಿಲಯ ಕಟ್ಟಡ ನಿರ್ಮಾಣದ “ಭೂಮಿ ಪೂಜೆ” ಕಾರ್ಯಕ್ರಮದಲ್ಲಿ ವಿ.ವೀ.ಸಂಘದ ಅಧ್ಯಕ್ಷರಾದ  ಗುರುಸಿದ್ದಸ್ವಾಮಿ, ವೀ.ವಿ.ಸಂಘದ ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿಗಳಾದ ಬಿ.ವಿ. ಬಸವರಾಜ್, ಸಹ ಕಾರ್ಯದರ್ಶಿಗಳಾದ ದರೂರು ಶಾಂತವೀರನ ಗೌಡ, ಖಜಾಂಚಿಗಳಾದ ಗೋನಾಳ್ ರಾಜಶೇಖರ್ ಗೌಡ, ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ  ಶ್ರೀ  ಜಿ.ಎಂ ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ, ಜಾನೆಕುಂಟೆ ಪಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್, ವೀ.ವಿ.ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು-ಶ್ರೀಮತಿ ಕುಪ್ಪಗಲ್ ಗಿರಿಜ, ಶ್ರೀಬೈಲುವದ್ದಿಗೇರಿ ಯರ್ರಿಸ್ವಾಮಿ, ಹೆಚ್.ಎಂ.ಕಿರಣಕುಮಾರ್, ಶ್ರೀಯಾಲ್ಪಿ ಮೇಟಿ ಪಂಪನಗೌಡರು, ಪ್ರಾಂಶುಪಾಲರು ಡಾ||ಟಿ.ಹನುಮಂತರೆಡ್ಡಿ, ಉಪಪ್ರಾಂಶುಪಾಲರು ಡಾ||ಸವಿತಾ ಸೋನೊಳಿ, ಹಾಗೂ ವಿಭಾಗದ ಮುಖ್ಯಸ್ಥರುಗಳು, ಸಿಬ್ಬಂಧಿವರ್ಗದವರ ಸಮ್ಮುಖದಲ್ಲಿ ಜರುಗಿತು.
ವಿ.ವೀ.ಸಂಘದ ಅಧ್ಯಕ್ಷರಾದ  ಗುರುಸಿದ್ದಸ್ವಾಮಿ ಮಾತನಾಡಿ, “ ಇಂದಿನ ಕಳ್ಯಾಣಕರ್ನಾಟಕ ಕೆಲವು ದಿನಗಳ ಹಿಂದೆ ಹೈದ್ರಾಬಾದ-ಕರ್ನಾಟಕ ಭಾಗವೆಂದು ಕರೆಯಲ್ಪಡುತ್ತಿದ್ದ ಈ ಹಿಂದುಲಿದ ಪ್ರದೇಶದಲ್ಲಿ ಕಳೆದ ಒಂದು ಶತಮಾನದಿಂದ ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಶ್ರಮಿಸುತ್ತಿರುವ ವೀರಶೈವ ವಿದ್ಯಾವರ್ಧಕ ಸಂಘದ ಅನೇಕ ಸಂಸ್ಥೆಗಳು ಗುಣಮಟ್ಟ, ಮಾನವೀಯ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಯಶಸ್ಸನ್ನು ಸಾಧಿಸಿದೆ. ಇಲ್ಲಿನ ವಿದ್ಯಾರ್ಥಿ ವೃಂದವು ಪದವಿಧರರಾಗಿ ಹಲವಾರು ಉನ್ನತ ಸ್ಥಾನಗಳಲ್ಲಿದ್ದು, ಸಮಾಜಕ್ಕೆ, ದೇಶಕ್ಕೆ ಅಪಾರ ಸೆವೆಸಲ್ಲಸುತ್ತಿದ್ದಾರೆ.” ಎಂದರು.
ಕಾರ್ಯದರ್ಶಿಗಳಾದ ಬಿ.ವಿ. ಬಸವರಾಜ್, “ಆಧುನಿಕ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವ ಈ ದಿನಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು, ವಸತಿ, ಇನ್ನಿತರ ಸೌಕರ್ಯಗಳು ಒದಗಿಸುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ದೊಡ್ಡ ಸವಾಲಾಗಿದೆ, ಆದರೂ ವೀರಶೈವ ವಿದ್ಯಾವರ್ಧಕ ಸಂಘದ ಎಲ್ಲ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ”  ಎಂದು ಅವರು ವಿವರಿಸಿದರು.