ಆರ್.ಬಿ.ವೈ.ಎಂ ಕಾಲೇಜ್ ನಲ್ಲಿ ರಾಜ್ಯೋತ್ಸವ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.02: “ದೀರ್ಘಕಾಲಮಾನದ ಶ್ರೀಮಂತ ಹಿರಿಮೆಯ ಭಾಷೆ ನಮ್ಮ ಕನ್ನಡ ಭಾಷೆ,  ಹಿಂದೆಯೇ ಬ್ರಿಟೀಷ್ ಸರಕಾರದ ಮದ್ರಾಸ್ ಪ್ರಾಂತದಲ್ಲಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಕನ್ನಡ ಭಾಷೆ,  ಜೀವಂತವಾಗಿಸಿದ ಕೀರ್ತಿ ವೀರಶೈವ ವಿಧ್ಯಾವರ್ಧಕ ಸಂಘಕ್ಕಿದೆ, ಬಳ್ಳಾರಿ ಜಿಲ್ಲೆ ಕರ್ನಾಟಕದಲ್ಲಿ ಉಳಿಯುವಲ್ಲಿ ವೀರಶೈವ ವಿಧ್ಯಾವರ್ಧಕ ಸಂಘದ ಪಾತ್ರ ಬಹಳದೊಡ್ಡದು. ಮುಂದಿನ ಪೀಳಿಗೆಯ ವಿದ್ಯಾರ್ಥಿವೃಂದದವರಾದ ನೀವುಗಳು, ನಮ್ಮ ಕರ್ನಾಟಕ ರಾಜ್ಯದಿಂದ ಉತ್ತಮ ಸಂಶೋದನೆ, ಸೃಜನಶೀಲತೆ, ಉದ್ಯಮಶೀಲತೆಯಿಂದ ದೇಶಕ್ಕೆ ಹೊಸ ಯಶಸ್ಸು ,ಕೊಡುಗೆಗಳು ನೀಡಬೇಕು   ” ಎಂದು ಪ್ರಾಂಶುಪಾಲರು ಡಾ|| ಟಿ. ಹನುಮಂತರೆಡ್ಡಿ ಕರೆ ನೀಡಿದರು.
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವೀರಶೈವ ವಿಧ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 67ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ,  ಮಹಾವಿದ್ಯಾಲಯದ ಮ್ಯಾನೆಜಮೆಂಟ್ ವಿಭಾಗದ ಮುಖ್ಯಸ್ಥರು ಡಾ|| ಏ.ತಿಮ್ಮನ ಗೌಡರು, ವಿದ್ಯುತ್ ವಿಭಾಗದ ಮುಖ್ಯಸ್ಥರು ಡಾ|| ಕೊಟ್ರೇಶ್, ಮೆಕ್ಯಾನಿಕಲ್ ವಿಭಾಗದ ಡಾ|| ತೋಟಪ್ಪ ಚಿತ್ರಿಕಿ, ಕಂಪ್ಯೂಟರ್ ವಿಭಾಗದ ಡಾ|| ಸಾಯಿ ಮಾಧವಿ, ಡಾ|| ಅನೂರಾಧ ಎಸ್.ಜಿ,  ಶ್ರೀಮತಿ ಅಪರ್ಣ ವಸ್ತ್ರದ, ಗಣಿತಶಸ್ತ್ರಾ ವಿಭಾಗದ ಡಾ|| ಸುಮಂಗಳ,ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿವೃಂದದವರೂ ಭಾಗವಹಿಸಿದ್ದರು.

One attachment • Scanned by Gmail