ಆರ್.ಬಿ.ವೈ.ಎಂ ಕಾಲೇಜ್ ನಲ್ಲಿ ಪ್ರಾಜೆಕ್ಟ್ ಎಕ್ಸಿಬಿಷನ್ ಅವಿಷ್ಕಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.20: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದವರಿಂದ “ಪ್ರಾಜೆಕ್ಟ್ ಎಕ್ಸಿಬಿಷನ್ ಆವಿಷ್ಕಾರ್ 2023” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉಪಪ್ರಾಂಶುಪಾಲರು ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ|| ಸವಿತ ಸೊನೊಳಿ, ಮಾತನಾಡುತ್ತಾ  ತಾಂತ್ರಿಕ ಹಾರ್ಡ್‍ವೇರ್ ಮತ್ತು ಸಾಫ್ಟವೇರ್‍ಗಳ ಜ್ಞಾನದಿಂದ ಎಲ್ಲಾ ವಿದ್ಯಾರ್ಥಿಗಳು ಸ್ವತಃ ಸಮಾಜಕ್ಕೆ ಅನುಕೂಲವಾದ ವಿವಿಧವಾದ ಪ್ರಾಜೆಕ್ಟ್‍ಗಳನ್ನು ತಯಾರಿಸಿದ್ದು ಸಂತೋಷ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ತೀರ್ಪುಗಾರರಾಗಿ ಕುಡುತಿನಿ ಕೆ.ಪಿ.ಸಿ.ಎಲ್ ನ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿ.ಎಸ್. ಶ್ರೀನಿವಾಸ್ ,  ಪಿಡಿಐಟಿಯ ನಿವೃತ್ತ ಪ್ರಾಂಶುಪಾಲರಾದ ಡಾ|| ಎಸ್.ಎಮ್. ಶಶಿಧರ್ ಇವರು ಆಗಮಿಸಿ ವಿದ್ಯಾರ್ಥಿಗಳು ಅಬಿವೃಧ್ದಿಪಡಿಸಿದ ಪ್ರತಿಯೊಂದು ಪ್ರಾಜೆಕ್ಟ್ ಮಾದರಿಯನ್ನು ಹಾಗೂ ಅದರ ಮಾಹಿತಿಯನ್ನು ವಿದ್ಯಾರ್ಥಿಗಳಿಂದ ಆಲಿಸಿದರು ಹಾಗು ಅತ್ಯುತ್ತಮವಾದ ಪ್ರಾಜೆಕ್ಟ್ ಆಯ್ಕೆ ಮಾಡವ ಕಾರ್ಯವನ್ನು ನಿರ್ವಹಿಸಿದರು. ಈ ಕಾರ್ಯಕ್ರಮಕ್ಕೆ ಆರ್.ವೈ.ಎಮ್,ಇ,ಸಿ  ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಾಗೂ ಕೆ.ಪಿ.ಸಿ.ಯಲ್ ಕುಡುತಿನಿಯಲ್ಲಿ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿರುವ ವಸಂತ್ ಕುಮಾರ್ ಮತ್ತು ಕುಮಾರ್ ರಮೇಶ್ ಬಾಬು ಆಗಮಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ ಡಾ|| ಎಸ್.ಎಮ್. ಶಶಿಧರ್ ಮಾತನಾಡುತ್ತಾ, ನೂತನ ಆವಿಷ್ಕಾರಗಳು ಮನುಷ್ಯನ ಜೀವನವನ್ನು ಹೇಗೆ ಸುಲಭಗೊಳಿಸಬಲ್ಲವು ಎಂದು ತಿಳಿಸುತ್ತಾ ಸಾಮಾನ್ಯ ಜನಜೀವನದಲ್ಲಿ ನೂತನ ಆವಿಷ್ಕಾರಗಳು ಉತ್ತಮ ಬದಲಾವಣೆಯನ್ನು ತರಬಲ್ಲವು ಆದರಿಂದ್ದ ಈ ವಿಷಯ ಕುರಿತಾಗಿ ವಿದ್ಯಾರ್ಥಿಗಳು ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ತಿಳಿಸಿದರು. ಇನ್ನೋರ್ವ ತೀರ್ಪುಗಾರರಾಗಿ ಆಗಮಿಸಿದ ಕೆ.ಪಿ.ಸಿ.ಯಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿ.ಎಸ್. ಶ್ರೀನಿವಾಸ್ ಇವರು ಮಾತನಾಡುತ್ತಾ, ಕೆ.ಪಿ.ಸಿ.ಎಲ್ ನಲ್ಲಿ ಇರುವ ತಂತ್ರಜ್ಞಾನವನ್ನು ವಿವರಿಸುತ್ತಾ ತುರ್ತು ಪರಿಸ್ಥಿತಿಯಲ್ಲಿ ಅಭಿಯಂತರರು ಯಾವ ರೀತಿ ಕಾರ್ಯತತ್ಪರರಾಗಿರಬೇಕು ಎಂದು ತಿಳಿಸಿದರು ಹಾಗೂ ವಿದ್ಯಾರ್ಥಿಗಳು ತಮ್ಮನ್ನು ಹೇಗೆ ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
“ಪ್ರಾಜೆಕ್ಟ್ ಎಕ್ಸಿಬಿಷನ್ ಆವಿಷ್ಕಾರ್” ನಲ್ಲಿ ಒಟ್ಟು ನಾಲ್ಕು ಅತ್ಯುತ್ತಮ ಪ್ರಾಜೆಕ್ಟ್‍ಗಳಿಗೆ ಪ್ರಶಸ್ತಿ ಹಾಗು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.  ಡಾ|| ಎಸ್ ಪ್ರಭಾವತಿ ಸ್ವಾಗತಿಸಿದರು, ಶ್ರೀಮತಿ ರೋಹಿಣಿ .ಹೆಚ್.ಎಂ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ, ಶ್ರೀಮತಿ ರಾಖೀ ಪಾಟೀಲ್ ಹಾಗೂ    ವಿನಯ್ ಎ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು ಶ್ರೀಮತಿ ಅಶ್ವಿನಿ .ಕೆ ಕಾರ್ಯಕ್ರಮವನ್ನು ವಂದಿಸಿದರು ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಮತ್ತು ಇನ್ನಿತರರು ಭಾಗವಹಿಸಿದ್ದರು.