ಆರ್.ಬಿ.ವೈ.ಎಂ ಕಾಲೇಜ್ ನಲ್ಲಿ ಪದವಿ ದಿನಾಚರಣೆ

????????????????????????????????????


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.20: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್.ವೈ.ಮಹಾಬಲೇಶ್ವರಪ್ಪತಾಂತ್ರಿಕ ಮಹಾವಿದ್ಯಾಲಯದಲ್ಲಿಂದು ಬೆಳಿಗ್ಗೆ 11.00ಕ್ಕೆ “ಪದವಿ ದಿನಾಚರಣೆ 2022-2023” ಸಮಾರಂಭ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶ್ವೇಶ್ವರಾಯ ತಾಂತ್ರ್ರಿಕ ವಿಶ್ವವಿದ್ಯಾಲಯದ ರೀಜನಲ್ ಡೈರೆಕ್ಟರ್-ಕಲಬುರಗಿ ವಲಯದ ಡಾ||ಬಸವರಾಜ್ ಗದಗೇ, ಮಾತನಾಡಿ, ವಿದ್ಯಾರ್ಥಿಗಳಿಗೆ ಅವರ ಮುಂದಿನ ಜೀವನದ ಭವಿಷ್ಯತ್ತಿಗಾಗಿ ಕೆಲವು ಸೂಕ್ತ ಸಲಹೆಗಳನ್ನು ನೀಡುತ್ತಾ “ ಈ ದಿನ ನೀವು ನಿಮ್ಮ ಪದವಿಯನ್ನು ಪೂರ್ಣಘೊಳಿಸುವುದು ನಿಮ್ಮ ಅಧ್ಯಯನದ ಅಂತ್ಯವಲ್ಲ, ವಾಸ್ತಾವವಾಗಿ ಇದು ಃಒಸ ಪ್ರಗತಿಪರ ಜೀವನದ ಆರಂಭವಾಗಿದೆ, ಈ ಕಳ್ಯಾಣ ಕರ್ನಾಟಕ ಪ್ರದೇಶದ ನಿಮ್ಮ ಸಂಸ್ಥೆಯ ಬಗ್ಗೆ ನೀವು ಹೆಮ್ಮೆ ಪಡಬೇಕು, ಕೆಲವರು ನಿಮ್ಮ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ, ಪೋಷಕರು, ಶಿಕ್ಷಕರು, ಸಮಾಜ ಕುಟುಂಬದ ಸದಸ್ಯರು,ಇತ್ಯಾದಿ. ಅವರ ನಬಿಕೆಯನ್ನು ಮುರಿಯಬೇಡಿ, ಎಂದು ನನ್ನ ವಿನಂತಿ, ನಿಮ್ಮ ಕನಸಿನಂತೆ ಉಜ್ವಲ ಭವಿಷ್ಯಯವನ್ನು ರಚಿಸಿ, ಉತ್ಮ ಉದ್ಯಮಿಯಾಗಬೇಕೆಂಬ ಉತ್ಸಾಹವನ್ನು ಹೊಂದಿರಿ, ಅದಕ್ಕಾಗಿ ಶ್ರಮಿಸಿ. ಈಗ ಭಾರತ ದೇಶವನ್ನು ವಿಶ್ವದ ಎರಡನೇ ಪ್ರಕಾಶಮಾನವಾದ, ನುರಿತ, ಪ್ರತಿಭಾವಂತ ಮಾನವ ಸಂಪನ್ಮೂಲ ದೇಶವೆಂದು ಕರೆಯಲಾಗುತ್ತಲಿದೆ. ನೀವು ಐ.ಐ.ಟೀಯನ್ನರಿಗಿಂತ, ವಿಶ್ವದ ಯಾವುದೇ ಪ್ರಮುಖ ವಿಶ್ವವಿದ್ಯಾಲಯಗಳ ಪಧವೀಧರರಿಗಿಂತ ಕಡಿಮೆಯಿಲ್ಲ, ಅಲ್ಲದೇ ಅಮೆರಿಕಾದೇಶದ ಅನೇಕ ವಿಶ್ವವಿದ್ಯಾಲಯಗಳು ತಮ್ಮ ಹಳೇಯ ವಿದ್ಯಾರ್ಥಿಗಳ ಕಾರಣದಿಂದಾಗಿ ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ನಾನು ನೋಡಿದ್ದೆಣೇ, ನೀವು ಸಹ ನಿಮ್ಮ ಈ ಸಂಸ್ಥೆಯನ್ನು ಪ್ರಕಾಶಮಾನವಾಗಿ ಮಾಡುತ್ತೀರಿ ಎನ್ನುವ ನಂಬಿಕೆ ಇದೆ, ನಿಮಗೆ ಎಲ್ಲಾ ಶುಭಾಶಯಗಳು” ಎಂದು ನುಡಿದರು.
ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರು ಹಾಗು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಲ್ಲಂಚನ್ನಪ್ಪ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ ಜಿ.ಎಂ.ಮಲ್ಲಿಕಾರ್ಜುನರೆಡ್ಡಿ, ರೂಪನಗುಡಿ ಬಸವರಾಜ, ಜಾನೆಕುಂಟೆ ಪೋಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್‍ಕುಮಾರ್, ವಿ.ವೀ.ಸಂಘದ ಕಾರ್ಯಕಾರಿಸಮಿತಿಯ ಸದಸ್ಯರು ಕೋರಿ ವಿರೂಪಾಕ್ಷಪ್ಪ, ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪ ಪ್ರಾಂಶುಪಾಲರಾದ, ಡಾ|| ಸವಿತ ಸೊನೊಳಿ, ಡೀನ್-ಪರೀಕ್ಷಾ  ಡಾ|| ಶ್ರೀಪತಿ.ಬಿ ಡೀನ್-ಅಕಾಡಮಿಕ್ ಡಾ||ಗಿರೀಶ್.ಹೆಚ್, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಪದವೀಧರರಾದ ಅಂತಿಮ ವರ್ಷದವಿದ್ಯಾರ್ಥಿಗಳು, ಅವರ ಪೋಷಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.