ಆರ್.ಬಿ.ವೈ.ಎಂ. ಕಾಲೇಜ್ ನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.11: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿಂದು ಬೆಳಿಗ್ಗೆ 10.30 ಗಂಟೆಗೆ,  2023-24ನೇ ಸಾಲಿನ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ “ ನವಸಂಗಮ” 2023-24”  ಜರುಗಿತು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀಗುರುಸಿದ್ದಸ್ವಾಮಿ, ಮಾತನಾಡುತ್ತಾ, “ಇಂದಿನ ಕಾಲ ಬದಲಾವಣೆಯ ಕಾಲ, ಕಾಂಪಿಟೇಶನ್ ಯುಗವಾಗಿದೆ, ಈ ಜಗತ್ತಿನಲ್ಲಿ ಉಳಿಸಿಕೊಳ್ಳಲು ನಿಮ್ಮ ತಾಂತ್ರಿಕ ಜ್ಞಾನ ಮತ್ತು ಕೌಶಲ್ಯಗಳನ್ನು ನವೀಕರಿಸಕೊಳ್ಳಬೇಕು. ತಾಂತ್ರಿಕವಾಗಿ ಮುಂದುವರಿದ ದೇಶಗಳಾದ ಚೈನಾ, ಜಪಾನ್ ವಿಧ್ಯಾರ್ಥಿಗಳಲ್ಲಿ ಇಂಜಿನೀರಿಂಗ್, ಹಾಗೂ ವೃತ್ತಿಪರ ಕೋರ್ಸ್‍ಗಳ ಬಗ್ಗೆ ಭಯವನ್ನು ಹೋಗಲಾಡಿಸಲು, ಈ ರೀತಿಯ ವಿದ್ಯಾರ್ಥಿ ಇಂಡಕ್‍ಷನ್ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿವೆ. ಅಲ್ಲದೇ ಇನ್ನಿತರೆ ದೇಶಗಳಾದ ಯುರೋಪ್, ಅಮೆರಿಕಾ, ಆಸ್ಟ್ರೇಲಿಯ ಗಳಲ್ಲಿ ನಮ್ಮ ಭಾರತೀಯ ಇಂಜಿನೀರಿಂಗ್ ಪದವೀಧರರಿಗೆ ಉದ್ಯೋಗ, ಉದ್ಯಮ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ನೀಡುತ್ತಲಿವೆ. ಆದ್ಧರಿಂದ ಈ ಅವಕಾಶಗಳನ್ನು ಬಳಸಿಕೋಳ್ಳಿ , ನೀವು ಪದವಿ ಪಡೆಯುವ ಸಂಸ್ಥೆ, ನಿಮ್ಮ ಪೋಷಕರಿಗೆ ಉತ್ತಮ ಹೆಸರು, ಖ್ಯಾತಿ ತರಬೇಕು” ಎನ್ನುತ್ತ ಶುಭಹಾರೈಸಿದರು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಆರ್.ರಾಮನಗೌಡರು,  ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯ ಅಧ್ಯಕ್ಷರಾದ  ಅಲ್ಲಂಚನ್ನಪ್ಪ, ಸಹಕಾರ್ಯದರ್ಶಿ ಜೆ. ಶಾಂತವೀರನಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್‍ಗೌಡರು, ಆರ್.ವೈ.ಎಮ್.ಇ.ಸಿ ಆಡಳಿತ ಮಂಡಳಿಯ ಸದಸ್ಯರಾದ ಜಿ.ಎಂ.ಮಲ್ಲಿಕಾರ್ಜುನರೆಡ್ಡಿ, ರೂಪನಗುಡಿ ಬಸವರಾಜ, ಜಾನೆಕುಂಟೆ ಪೋಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್‍ಕುಮಾರ್  ಶುಭಹಾರೈಸಿದರು. ಆರಂಭದಲ್ಲಿ ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ ಉಪಪ್ರಾಂಶುಪಾಲರಾದ ಡಾ|| ಶ್ರೀಮತಿ ಸವಿತಾ ಸೊನೋಳಿ, ಸ್ವಾಗತಿಸಿ ಸ್ಟೂಡೆಂಟ್ ಇಂಡಕ್ಷನ್ ಪ್ರೋಗ್ರಾಮ್‍ನ ಬಗ್ಗೆ ವಿವರಿಸಿದರು. ಶ್ರೀಮತಿ ರೋಹಿಣಿ ಹೆಚ್.ಎಂ. ನಿರೂಪಿಸಿದರು, ಡಾ||ಬಿ.ಸುಮಂಗಳ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಡೀನ್-ಅಕಾಡಮಿಕ ಡಾ||ಹೆಚ್.ಗಿರೀಶ್, ಡೀನ್-ಪರೀಕ್ಷಾ ಡಾ||ಬಿ.ಶ್ರೀಪತಿ, ಇಂಜಿನೀರಿಂಗ್ ವಿಭಾಗಗಳ ಮುಖ್ಯಸ್ಥರು- ಡಾ||ಹೆಚ್.ಎಂ.ಮಲ್ಲಿಕಾರ್ಜುನ, ಡಾ||ಕೋರಿ ನಾಗರಾಜ, ಡಾ||ಚಿತ್ರಿಕಿ ತೋಟಪ್ಪ, ಡಾ||ಕೊಟ್ರೇಶ್.ಎಸ್, ಡಾ||ಕೊಟ್ಟೂರೇಶ್ವರ.ಎನ್.ಎಂ, ಡಾ||ನಾಗಭೂಷಣ.ಎನ್.ಎಂ, ಮೊದಲನೇಯವರ್ಷ ವಿದ್ಯಾರ್ಥಿವೃಂದರ ಸಂಯೋಜಕರು- ಡಾ||ಚಂದ್ರಗೌಡ.ಎಂ, ಡಾ|| ಚಿನ್ನಾ.ವಿ.ಗೌಡರು, ಡಾ||ವೀರಭದ್ರಪ್ಪ ಅಲಗೂರು, ಶ್ರೀಮತಿ ರಾಖೀಪಾಟೀಲ್, ಗಣ್ಯರು ಮಹಾವಿದ್ಯಾಲಯದ ಶಿಕ್ಷಕವೃಂದದವರು, ಸಿಬ್ಬಂದಿವರ್ಗದವರು ವಿದ್ಯಾರ್ಥಿವೃಂದದವರು, ಪೋಷಕರು ಭಾಗವಹಿಸಿದ್ದರು.