ಆರ್.ಬಿ.ವೈ.ಎಂ ಕಾಲೇಜ್ ನಲ್ಲಿ ಕ್ರಿಕೆಟ್ ಪಂದ್ಯಾವಳಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.27: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ವಿಶ್ವೇಶ್ವರಾಯ  ತಾಂತ್ರಿಕ ವಿಶ್ವವಿದ್ಯಾಲಯದ  ಕಲಬುರ್ಗಿ ವಲಯದ  ಪುರುಷರ ಕ್ರಿಕೆಟ್ ಟೂರ್ನಮೆಂಟ್‍ಯನ್ನು ವಿದ್ಯುತ್ ವಿದ್ಯುನ್ಮಾನ ಇಂಜಿನೀರಿಂಗ್ ವಿಭಾಗದ ಮುಖ್ಯಸ್ಥರಾದ ಡಾ||ಕೊಟ್ರೇಶ.ಎಸ್, ಸಿವಿಲ್ ಇಂಜಿನೀರಿಂಗ್ ವಿಭಾಗದ ಡಾ||ಆದನಗೌಡ, ಮಹಾವಿದ್ಯಾಲಯ ಧೈಹಿಕ ಶಿಕ್ಷಕ ನಿರ್ದೇಶಕ- ವಿಜಯಮಹಂತೇಶ, ಹಾಗೂ ವಿವಿಧ ಕಾಲೇಜಿನ ದೈಹಿಕ ಶಿಕ್ಷಕರುಗಳು,ಇನ್ನಿತರರು ಚಾಲನೆ ನೀಡಿದರು.
ಈ 6 ದಿನದ ಪಂದ್ಯಾವಳಿಗಳಲ್ಲಿ ವಿಶ್ವೇಶ್ವರಾಯ  ತಾಂತ್ರಿಕ ವಿಶ್ವವಿದ್ಯಾಲಯ ಕಲಬುರ್ಗಿ ವಲಯದ  ಒಟ್ಟು 11 ತಂಡಗಳು  ಭಾಗವಹಿಸಲು ಆಗಮಿಸಿದ್ದರು. ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ “ಒಳ್ಳೆಯ ಮನೋಭಾವನೆಯಿಂದ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಗೆಲುವಿಗಾಗಿ ಪ್ರಯತ್ನಿಸಬೇಕು. ಆಟದಲ್ಲಿ ಸೋಲು ಗೆಲುವು ಸಾಮಾನ್ಯ, ಆದರೆ, ಸೋಲೇ ಗೆಲುವಿಗೆ ಮುಖ್ಯ ಮೆಟ್ಟಿಲು ಎಂಬುದನ್ನು ಮರೆಯಬಾರದು. ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಬೆಳಗಾವಿ ಅಧಿಕಾರಿಗಳಿಗೆ ಈ ಕ್ರಿಕೆಟ್ ಟೂರ್ನಮೆಂಟ್‍ಗೆ ನಮ್ಮ ಮಹಾವಿದ್ಯಾಲಯವನು ಆಯ್ಕೆ ಮಾಡಿದುದ್ದಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಆರಂಭದ ಮ್ಯಾಚ್ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ, ಬಳ್ಳಾರಿ ಹಾಗೂ ಬೀಳೂರು ಗುರುಬಸವ ಮಹಾಸ್ವಾಮೀಜಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮುಧೋಳ ನಡುವೆ ಜರುಗಿತು. ವೀ.ವಿ.ಸಂಘದ ಅಧ್ಯಕ್ಷರಾದ ಆರ್. ರಾಮನಗೌಡ ವೀ.ವಿ.ಸಂಘದ ಉಪಾಧ್ಯಕ್ಷರಾದ ಹಾಗು ಮಹಾವಿದ್ಯಾಲಯ ಆಡಳಿತಮಂಡಳಿಯ ಅಧ್ಯಕ್ಷರು  ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು,  ಆರ್.ವೈ.ಎಮ್.ಇ.ಸಿ ಆಡಳಿತ ಮಂಡಳಿಯ ಸದಸ್ಯರಾದ  ಜಿ.ಎಂ ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ, ಜಾನೆಕುಂಟೆ ಪೋಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ ಪ್ರಾಂಶುಪಾಲರು- ಡಾ|| ಟಿ.ಹನುಮಂತ ರೆಡ್ಡಿ, ಉಪಪ್ರಾಂಶುಪಾಲರಾದ ಡಾ|| ಶ್ರೀಮತಿ ಸವಿತಾ ಸೊನೋಳಿ ಶುಭಹಾರೈಸಿದರು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿವೃಂದದವರೂ ಭಾಗವಹಿಸಿದ್ದರು.