ಆರ್.ಬಿ.ವೈ.ಎಂ ಕಾಲೇಜ್ ನಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.01: ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಇಂಡಸ್ಟ್ರಿಯಲ್ ಅಡ್ವಾನ್ಸ್‍ಮೆಂಟ್ ಅಂಡ್ ರಿಸರ್ಚ್ ಆನ್ ಎಐ&ಎಂಎಲ್  ಐದು ದಿನದ ಅಧ್ಯಾಪಕರ ಅಭಿವೃದ್ದಿ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾಟ ಮತ್ತು ಅನಾಲೈಟಿಕ್ ಸ್ಪೆಷಲಿಸ್ಟ್, ಹೆಚ್&ಎಂ ಗ್ರೂಪ್ ಬಿಸಿನೆಸ್ ಟೆಕ್ ಸ್ವಿಡನ್ ಹಾಗೂ ಇ.ಸಿ.ಇ ವಿಭಾಗದ ಹಳೆಯ ವಿದ್ಯಾರ್ಥಿ ಸುನೀಲ್ ರಾವ್ ಸರೋಡೆ ಇವರು ಎಐ&ಎಂಯಲ್ ಬಗ್ಗೆ ಐದು ದಿನಗಳ ಕಾಲ ವಿವರವಾಗಿ ತಿಳಿಸಲಿದ್ದಾರೆ. ಈ ತಂತ್ರಜ್ಞಾನವು ಆಧುನಿಕವಾಗಿದ್ದು ಅನೇಕ ಅವಿಷ್ಕಾರಗಳನ್ನು ಅಭಿವೃದ್ದಿ ಪಡಿಸಲು ಸಹಕಾರಿಯಾಗಲಿದೆ ಹಾಗೂ  ಎಐ&ಎಂಯಲ್ ತಂತ್ರಜ್ಞಾನದಲ್ಲಿ ಪಿಹೆಚ್.ಡಿ ಹಾಗೂ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್‍ಗಳನ್ನು ಮಾಡಲು ಅನುಕೂಲವಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ  ಡಾ|| ಟಿ. ಹನುಮಂತರೆಡ್ಡಿ, ಅವರು ಮಾತನಾಡಿ, ಇಂತಹ ಕಾರ್ಯಗಾರಗಳು ನ್ಯಾಕ್, ಎನ್.ಬಿ.ಎ, ಪ್ರಮಾಣ ಪತ್ರ ಪಡೆಯಲು ಅನುಕೂಲಗಳಾಗಿವೆ ಹಾಗೂ ಅಧ್ಯಾಪಕರು ವೈಯುಕ್ತಿಕವಾಗಿ ಅಭಿವೃದ್ದಿಗೊಳ್ಳಲು ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಉಪಪ್ರಾಂಶುಪಾಲರು, ಇಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೆಷನ್ ವಿಭಾಗದ ಮುಖ್ಯಸ್ಥರಾದ ಡಾ|| ಸವಿತ ಸೊನೊಳಿ, ಮಾತನಾಡುತ್ತಾ,  ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಸುನೀಲ್ ರಾವ್ ಸರೋಡೆ ಅವರು ಸ್ವಿಡನ್  ಅಲ್ಲಿ ಕೆಲಸ ಮಾಡುತ್ತಿದ್ದರು ನಮ್ಮ ಕಾಲೇಜಿನ ಮೇಲೆ ಇರುವ ಅಭಿಮಾನದಿಂದ ಇಲ್ಲಿಗೆ ಬಂದು ಇಂತಹ ಕಾರ್ಯಕ್ರಮ ನಡೆಸಿಕೊಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತದೆ ಎಂದು ಶ್ಲಾಘೀಸಿದರು.
ಈ ಕಾರ್ಯಕ್ರಮದಲ್ಲಿ ಎಐ&ಎಂಯಲ್ ವಿಭಾಗದ ಮುಖ್ಯಸ್ಥರಾದ ಡಾ|| ಸಾಯಿಮಾಧವಿ, ಡಾ|| ಪ್ರಭಾವತಿ, ಡಾ|| ಚಂದ್ರಶೇಖರ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರುಗಳು, ಭೋಧಕ, ಭೋಧಕೇತರರ ಸಿಬ್ಬಂದಿಯವರು ಭಾಗವಹಿಸಿದ್ದರು.
ಶ್ರೀಮತಿ ವಾಣಿ ಹೆಚ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಚಿನ್ನ ವಿ. ಗೌಡರ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು, ಸಂತೋಷ್ ಮುಗಳಿ ಕಾರ್ಯಕ್ರಮವನ್ನು ವಂದಿಸಿದರು.