(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.22: ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ಹಾಗೂ ವಿದ್ಯೂನ್ಮಾಮ ವಿಭಾಗಕ್ಕೆ ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡಿಟೇಷನ್ ಈ ರಾಷ್ಟ್ರೀಯ ಗುಣಮಟ್ಟದ ಮಾನ್ಯತೆ ದೊರಕಿರುವ ಸಂಸ್ಥೆಗೆ ಹೆಮ್ಮೆಯ ಗತಿ ಮೂಡಿಸಿದೆ. ಅಲ್ಲದೇ ಈಗಾಗಲೇ ಸಿವಿಲ್ ಇಂಜಿನೀರಿಂಗ್ ವಿಭಾಗ, ಮೆಕ್ಯಾನಿಕಲ್ ಇಂಜಿನೀರಿಂಗ್ ವಿಭಾಗ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನೀರಿಂಗ್ ಕಂಪ್ಯೂಟರ್ ಸೈನ್ಸ್ ಇಂಜಿನೀರಿಂಗ್ ವಿಭಾಗಗಳಿಗೆ ಮಾನ್ಯತೆ ದೊರಕಿರುತ್ತದೆ.
ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯವು ಉತ್ತರ ಕನಾಟಕದ ಕಲಬುರ್ಗಿ ವಿಭಾಗಮಟ್ಟದ ಎಲ್ಲಾ ಇಂಜಿನೀರಿಂಗ್ ಕಾಲೇಜುಗಳಲ್ಲಿ, ಅಲ್ಲದೇ ಕನಾಟಕ ರಾಜ್ಯದ ಕೆಲವೇ ಕೆಲವು ಅತ್ಯುತ್ತಮ ಇಂಜಿನೀರಿಂಗ್ ಕಾಲೇಜುಗಳಲ್ಲಿ ಈ ಮಾನ್ಯತೆ ಪಡೆದಿರುತ್ತವೆ. ಹಾಗು ನೆರೆಯ ರಾಜ್ಯಗಳಲ್ಲಿ ಒಂದೇ ಇಂಜಿನೀರಿಂಗ್ ಕಾಲೇಜಿನ ಪ್ರಮುಖ ಹಾಗೂ ಬಹುತೇಕ ಎಲ್ಲಾ ವಿಭಾಗಗಳಿಗೆ ಈ ಮಾನ್ಯತೆ ದೊರಕಿರುವ ಸಂಸ್ಥೆಯಾಗಿದೆ ಎಂಬ ಹೊಗಳಿಕೆ, ಹೆಸರುವಾಸಿಗೆ ಪಾತ್ರ ವಾಗಿದೆ ಎಂದು ಕಾಲೇಜ್ ನ ಪ್ರಾಚಾರ್ಯರು ತಿಳಿಸಿದ್ದಾರೆ.