ಆರ್.ಬಿ.ವೈಎಂ ಕಾಲೇಜ್ ನಲ್ಲಿ ಸ್ವಾತಂತ್ರ್ಯೋತ್ಸವ

ಬಳ್ಳಾರಿ, ಆ.15 ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಆರ್.ರಾಮನಗೌಡರು,  ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯ ಅಧ್ಯಕ್ಷರಾದ  ಅಲ್ಲಂಚನ್ನಪ್ಪ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಸಹಕಾರ್ಯದರ್ಶಿ ಜೆ. ಶಾಂತವೀರನಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್‍ಗೌಡರು, ಆರ್.ವೈ.ಎಮ್.ಇ.ಸಿ ಆಡಳಿತ ಮಂಡಳಿಯ ಸದಸ್ಯರಾದ ಜಿ.ಎಂ.ಮಲ್ಲಿಕಾರ್ಜುನರೆಡ್ಡಿ, ರೂಪನಗುಡಿ ಬಸವರಾಜ, ಜಾನೆಕುಂಟೆ ಪೋಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್‍ಕುಮಾರ್  ಇವರುಗಳು, ಪ್ರಾಂಶುಪಾಲರು ಡಾ|| ಟಿ.ಹನುಮಂತರೆಡ್ಡಿ, ಉಪಪ್ರಾಂಶುಪಾಲರು ಡಾ|| ಸವಿತಾ ಸೊನೋಳಿ ಇವರುಗಳ ಉಪಸ್ಥಿತಿಯಲ್ಲಿ ದ್ವಜಾರೋಹಣವನ್ನು ನೇರವೇರಿಸಿ, ಬೋಧಕ ಹಾಗು ಭೋಧಕೇತರ ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರಗೀತೆಯನ್ನು ಹಾಡಿ ರಾಷ್ಟ್ರದ್ವಜಕ್ಕೆ ಗೌರವವನ್ನು ಸಲ್ಲಿಸಿದರು.ಪ್ರಾಂಶುಪಾಲರು ಡಾ|| ಟಿ.ಹನುಮಂತರೆಡ್ಡಿ, ಸ್ವಾಗತಿಸಿದರು, ಮಹಾವಿದ್ಯಾಲಯದಿಂದ ಭಾರತೀಯ ಸಮಾಜಕ್ಕೆ ನೀಡಿದ ಕೋಡುಗೆ ಸಾಧನೆಗಳು ವಿವರಿಸಿದರು, ಡೀನ್-ಅಕಾಡಮಿಕ್ ಡಾ|| ಹೆಚ್.ಗಿರೀಶ, ಡೀನ್-ಪರೀಕ್ಷ ವಿಭಾಗ  ಡಾ|| ಬಿ.ಶ್ರೀಪತಿ, ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಧರು, ಭೋಧಕ, ಭೊಧಕೇತರು, ವಿದ್ಯಾರ್ಥಿಗಳುಭಾಗವಹಿಸಿದ್ದರು. ಈಸುದಿನದಂದು ನಮ್ಮ ಮಹಾವಿದ್ಯಾಲಯದ  ವಿದ್ಯಾರ್ಥಿಗಳು ಭಾರತಾಂಬೆಗೆ ಸಮರ್ಪಿಸಲು, ಉಪನ್ಯಾಸಕರ ಪ್ರೋತ್ಸಾಹದಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಮಹಾವಿದ್ಯಾಲಯದ ದೈಹಿಕ ನಿರ್ದೇಶಕರು ಶ್ರೀ ವಿಜಯ ಮಹಾಂತೇಶ ಮತ್ತು ವಿದ್ಯಾರ್ಥಿವೃಂದ – ಪುನೀತ್, ರಚಿತ್, ದೀಪಕ್, ವಿಶಾಲ್, ಪ್ರವೀಣ, ನಿಹಾರಿಕ, ಸಬೀಹ, ಇನ್ನಿತರರು, ಪ್ರಾದ್ಯಾಪಕಿ ಶ್ರೀಮತಿ ರೋಹಿಣಿ ಹೆಚ್.ಎಂ, ಕಾರ್ಯಕ್ರಮ ನಿರ್ಹಹಿಸಿದರು.
One attachment • Scanned by Gmail