ಆರ್ ಬಿ ತಿಮ್ಮಾಪುರಗೇ ಡಿಸಿಎಂ, ಕೂಡ್ಲಿಗಿ ಡಾ ಶ್ರೀನಿವಾಸಗೆ ಸಚಿವ ಸ್ಥಾನ ನೀಡಲು ಮನವಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.19 :- ಕಳೆದ ಮೂರ್ನಾಕು ಸಲ ಸಚಿವರಾಗಿ ಅನುಭವವಿರುವ ಆರ್ ಬಿ ತಿಮ್ಮಾಪುರಗೆ ಡಿಸಿಎಂ ಹುದ್ದೆ ಹಾಗೂ ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ ಶ್ರೀನಿವಾಸ ಅವರಿಗೆ ಮಂತ್ರಿ ಸ್ಥಾನ ಕಲ್ಪಿಸುವಂತೆ ಕಾಂಗ್ರೇಸ್ ಜಿಲ್ಲಾಘಟಕದ ಎಸ್ಸಿ ಮೋರ್ಚಾ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿಜಯನಗರ ಜಿಲ್ಲಾ ಮಹಿಳಾ ಎಸ್ಸಿ ಘಟಕದ  ಜಿಲ್ಲಾಧ್ಯಕ್ಷೆ ಗುಡೇಕೋಟೆ ವಿಶಾಲಾಕ್ಷಿ ರಾಜಣ್ಣ ಹಾಗೂ  ಕಾಂಗ್ರೇಸ್ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಡಿ ಹೆಚ್ ದುರುಗೇಶ  ಮಾತನಾಡುತ್ತಾ ಕಾಂಗ್ರೇಸ್ ಸರ್ಕಾರದಲ್ಲಿ ನಾನಾ ಖಾತೆಗಳನ್ನು ನಿಭಾಯಿಸಿರುವ ಆರ್ ಬಿ ತಿಮ್ಮಾಪುರ ಅವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಡಿಸಿಎಂ ಹುದ್ದೆ ನೀಡುವುದರಿಂದ ಎಡಗೈ ಸಮುದಾಯಕ್ಕೆ ಬಲ ಕೊಟ್ಟಂತಾಗುತ್ತದೆ ಅಲ್ಲದೆ ಸಾಮಾಜಿಕ ನ್ಯಾಯ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದ ಅವರು ಕೂಡ್ಲಿಗಿ ಕ್ಷೇತ್ರದ ಇತಿಹಾಸದಲ್ಲೇ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಕೂಡ್ಲಿಗಿ ಕ್ಷೇತ್ರದ ನೂತನ ಶಾಸಕ ಡಾ ಎನ್ ಟಿ  ಶ್ರೀನಿವಾಸ ಅವರಿಗೆ ಯಾವುದಾದರು ನೂತನ ಸರ್ಕಾರದಲ್ಲಿ ವೈದ್ಯಪದವೀಧರರಾದ ಅವರ ಶೈಕ್ಷಣಿಕ ಅನುಭವಕ್ಕೆ ವೈದ್ಯಕೀಯ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಎನ್ ಎಸ್ ಯು ಐ ನ ಬಳ್ಳಾರಿ ಜಿಲ್ಲಾಧ್ಯಕ್ಷ ಕೆ ತಿಪ್ಪೇಸ್ವಾಮಿ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಹಿರೇಹೆಗ್ಡಾಳ್ ಬಿ ನಾಗರಾಜ, ಗ್ರಾಮಪಂಚಾಯಿತಿ ಸದಸ್ಯ ಬಿ ಸೋಮಶೇಖರ, ಕೂಡ್ಲಿಗಿ ತಾಲೂಕಿನ ಮುಖಂಡರಾದ ಮನೋಹರ ಹೆಗಡೆ, ಹೆಗ್ಡಾಳ್ ಪ್ರಶಾಂತ್, ಸೂಲದಹಳ್ಳಿ ವೆಂಕಟೇಶ, ಜೆ ರವಿಕುಮಾರ, ಗುಡೇಕೋಟೆ ಹನುಮಂತು ಹಾಗೂ ಇತರರಿದ್ದರು.

One attachment • Scanned by Gmail