ಆರ್. ಧ್ರುವನಾರಾಯಣ ನಿಧನಕ್ಕೆ ಕಂಬನಿ: ಜಿಲ್ಲಾ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ

ದಾವಣಗೆರೆ. ಮಾ.೧೨; ಕೆಪಿಸಿಸಿ ಕಾರ್ಯಾಧ್ಯಕ್ಷರು, ಮಾಜಿ ಸಂಸದರಾದ ಆರ್. ಧ್ರುವನಾರಾಯಣ ನಿಧನಕ್ಕೆ ಕೆಪಿಸಿಸಿ ವಕ್ತಾರಾರಾದ ಡಿ.ಬಸವರಾಜ ಕಂಬನಿ ಮಿಡಿದಿದ್ದಾರೆ. ಅವರು ದಾವಣಗೆರೆ ಜಿಲ್ಲಾ ಕಾಂಗ್ರೆಸ್, ಭಾರತ ರಾಷ್ಟ್ರೀಯ ಮಜ್ದೂರು ಕಾಂಗ್ರೆಸ್ ವಿಭಾಗ ಏರ್ಪಡಿಸಿದ್ದ ಆರ್. ಧ್ರುವನಾರಾಯಣ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಧ್ರುವನಾರಾಯಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಿದ್ದರು. ಧ್ರುವನಾರಾಯಣ್  ಕಳೆದ 40 ವರ್ಷಗಳಿಂದ ವಿದ್ಯಾರ್ಥಿ ಕಾಂಗ್ರೆಸ್ ಯುವ ಕಾಂಗ್ರೆಸ್ ನಾಯಕರಾಗಿ, ಸಂಸದರಾಗಿ, ಶಾಸಕರಾಗಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರ ಸಾವು ತಮಗೆ ದಿಗ್ಭ್ರಮೆ ತಂದಿದೆ. ವಿದ್ಯಾರ್ಥಿ ಕಾಂಗ್ರೆಸ್ ನಿಂದ ರಾಜ್ಯ ಪದಾಧಿಕಾರಿಗಳಾಗಿ ಒಟ್ಟಿಗೆ ಸೇವೆ ಸಲ್ಲಿಸಿದ್ದೆವು ಮಿತಭಾಷಿಯಾಗಿದ್ದ ಅವರು ಎಲ್ಲರನ್ನೂ ಪ್ರೀತಿಸುವ ಗುಣವುಳ್ಳ ನಾಯಕರಾಗಿದ್ದರು ಅಲ್ಲದೇ ಧ್ರುವನಾರಾಯಣ್ ಅವರು ತಮಗೆ ಅತ್ಯಂತ ಉತ್ತಮ ಸ್ನೇಹಿತರಾಗಿದ್ದರು ಎಂದು ಡಿ. ಬಸವರಾಜ್ ಅವರು ನೆನೆದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಹಗಲಿರಲು ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನೆಯಲ್ಲಿ ತೊಡಗಿದ್ದರು ಅವರ ಅಗಲಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ, ರಾಜ್ಯಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಅವರ ಕುಟುಂಬ ವರ್ಗ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಡಿ. ಬಸವರಾಜ್  ಪ್ರಾರ್ಥಿಸಿದ್ದಾರೆ. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಮಹಮ್ಮದ್ ಜಿಕ್ರಿಯ, ವೀರಭದ್ರಪ್ಪ ಎನ್.ಎಸ್. ಕೆ.ಜಿ. ರಹಮತ್ ಉಲ್ಲಾ, ಬಿ.ಎಚ್. ಉದಯ್ ಕುಮಾರ್, ಗಿರಿಧರ್ ಸಾತಾಳ್, ಡಿ. ಶಿವಕುಮಾರ್, ಬಿ.ಎಸ್. ಸುರೇಶ್, ಮಂಜುನಾಥ್ ಕತ್ತಲಗೆರೆ, ವಸಂತ ನಾಯಕ್, ಮುಬಾರಕ್ ಸೇರಿದಂತೆ ಇತರರು ಹಾಜರಿದ್ದರು.