ಆರ್. ತಿಮ್ಮಪೂರಗೆ ಡಿಸಿಎಂ ಸ್ಥಾನಕ್ಕೆ ಮನವಿ

ಮಾನ್ವಿ,ಮೇ.೧೮- ಮಾದಿಗ ಸಮಾಜದ ಹಿರಿಯ ರಾಜಕಾರಣಿ ಆರ್.ಬಿ. ತಿಮ್ಮಾಪುರ ಅವರಿಗೆ ಡಿಸಿಎಂ ಸ್ಥಾನ ನೀಡಲು ಕಾಂಗ್ರೆಸ್ ಪಕ್ಷದ ಹೈಕಮಂಡಿಗೆ ಮಾದಿಗ ಸಮಾಜದ ಮುಖಂಡ ಹನುಮಂತ ಕೋಟೆ ಒತ್ತಾಯಿಸಿದ್ದಾರೆ.
ಮುಧೋಳ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ೧೯೮೯ ಮತ್ತು ೧೯೯೯ರಲ್ಲಿ ಶಾಸಕರಾಗಿ ೨೦೧೬ ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದು ಮತ್ತು ೨೦೨೩ ಮೇ ಹತ್ತರಂದು ನಡೆದ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿರುವ ಆರ್ ಬಿ ತಿಮ್ಮಾಪೂರ್ ಅವರನ್ನು ಪರಿಗಣಿಸಿ ಕಾಂಗ್ರೆಸ್ ವರಿಷ್ಠರು ಡಿಸಿಎಂ ಸ್ಥಾನ ನೀಡಬೇಕು.
ಕಳೆದ ಬಿಜೆಪಿ ಸರ್ಕಾರದಲ್ಲಿ ನಮ್ಮ ಸಮಾಜ ಅಂದರೆ ಮಾದಿಗ ಸಮಾಜದ ರಾಜಕಾರಣಿ ಗೋವಿಂದ್ ಕಾರಜೋಳ ಅವರಿಗೆ ಡಿಸಿಎಂ ಸ್ಥಾನ ನೀಡಿದ್ದರು ಅವರನ್ನು ಸೋಲಿಸಿ ಆರ್ ಬಿ ತಿಮ್ಮಾಪೂರವರು ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದಿದ್ದರಿಂದ ರಾಜ್ಯದಲ್ಲಿ ೧೩೫ ಕಾಂಗ್ರೆಸ್ ಪಕ್ಷದ ಶಾಸಕರು ಇರುವುದರಿಂದ ಕಾಂಗ್ರೆಸ್ ಸರ್ಕಾರ ಆಗುತ್ತದೆ ಹಾಗಾಗಿ ಆರ್ ಬಿ ತಿಮ್ಮಾಪೂರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು.
ಮಾಜಿ ಸಚಿವ ಆರ್.ಬಿ. ತಿಮ್ಮಾಪುರ್ ಅವರು ಈ ಹಿಂದೆ ಸಚಿವರಾಗಿ ಜಿಲ್ಲಾ ಉಸ್ತುವಾರಿಯಾಗಿ ಜವಾಬ್ದಾರಿಯನ್ನು ನಿರ್ವಹಿಸಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ರಾಜ್ಯದಲ್ಲಿ ಜನಸೇವೆಗೆ ಬದ್ಧರಾಗಿ ಪಕ್ಷ ಸಂಘಟನೆ ಮಾಡಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕರು.
ಮುಧೋಳ ಕ್ಷೇತ್ರದಲ್ಲಿ ಹಲವಾರು ಜನಪರ ಯೋಜನೆಗಳ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಡಗೈ ಸಮುದಾಯದ ಹಿರಿಯ ರಾಜಕಾರಣಿ ಆರ್. ಬಿ. ತಿಮ್ಮಾಪುರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಮಾದಿಗ ಸಮಾಜದ ಮುಖಂಡ ಮತ್ತು ಹೋರಾಟಗಾರ ಹನುಮಂತ ಕೋಟೆ ಅವರು ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ.