ಆರ್.ಟಿ.ಪಿ.ಎಸ್, ವೈಟಿಪಿಎಸ್‌ನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ

ರಾಯಚೂರು,ಏ.೨೭- ಪ್ರತಿ ವರ್ಷ ಹೇಗೆ ಯುಗಾದಿ ಹಬ್ಬ ಬರುತ್ತದೆ ಹಾಗೇ ಚುನಾವಣೆಗಳು ಬರುತ್ತವೆ, ಪತ್ರಿ ದಿನ ದಿನಪತ್ರಿಕೆಗಳಲ್ಲಿ ಚುನಾವಣೆ ಬಗ್ಗೆ ವಿಮರ್ಶೆಗಳನ್ನ ಬಗ್ಗೆ ಗಮನ ಕೊಡಿ, ನಮ್ಮ ಮನಸ್ಸಿನಲ್ಲಿ ಇರುವಂತ ತಪ್ಪು ಚಿಂತನೆಗಳನ್ನು ಬಿಟ್ಟು ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಅವರು ಹೇಳಿದರು.
ಅವರು ಏ.೨೫(ಮಂಗಳವಾರ) ತಾಲೂಕಿನ ಶಕ್ತಿನಗರ ಹಾಗೂ ಯರಮರಸ್‌ನ ಆರ್.ಟಿ.ಪಿ.ಎಸ್ ಹಾಗೂ ವೈಟಿಪಿಎಸ್‌ನಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
೨೦೧೪ರ ಮತ ಏಣಿಕೆ ನೋಡಿದರೆ ಅತೀ ಕಡಿಮೆ ಮತದಾನ ಆದಂತ ಜಿಲ್ಲೆ ರಾಯಚೂರು, ಯಾವ ಪ್ರದೇಶದಲ್ಲಿ ಕಡಿಮೆ ಮತದಾನ ಆಗುತ್ತದೆ ಎಂದು ನೋಡಿದರೆ ಶಕ್ತಿನಗರ, ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರು ಉತ್ಸಾಹ ದಿಂದ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದರು.
ಪ್ರತಿಯೊಬ್ಬ ಪ್ರಜೆಯೂ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ತಿಳಿದುಕೊಂಡು ಮತದಾನ ಮಾಡಿ, ಮತದಾನದಲ್ಲಿ ಪಾಲಗೊಳ್ಳಬೇಕೆಂದು ಹೇಳಿದರು.
ಮತದಾನದಂದು ಅಂಗವಿಕಲರಿಗೆ, ವಿಕಲಚೇತನರಿಗೆ ಮತಗಟ್ಟಿಗೆ ಬರುವಂತ ವ್ಯವಸ್ಥೆಯಲ್ಲಿ ಜಿಲ್ಲಾಧಿಕಾರಿಗಳ ಕಲ್ಪಸುತ್ತಾರೆ, ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಇರುವಂತ ಅವರಿಗೆ ಮತದಾನದಲ್ಲಿ ಭಾಗವಹಿಸಿ ಮತದಾನ ಮಾಡಿ, ಮೇ ೧೦ ರಂದು ಮತದಾನದ ಅರ್ಹ ಪಟ್ಟಿಯಲ್ಲಿ ಇರುವಂತ ಅವರನ್ನು ಕರೆತಂದು ಚುನಾವಣೆ ಎಂಬ ಮತದಾನ ಹಬ್ಬದಲ್ಲಿ ಭಾಗವಹಿಸಿ ಎಂದು ಹೇಳಿದರು.
ಈ ಹಿಂದೆ ರಾಯಚೂರಿನಲ್ಲಿ ಮತದಾನ ಶೇಕಡವಾರ ೮೦ ತನ್ನು ಈ ವರ್ಷ ೯೦ ರಷ್ಟು ಮತ ಬರುವ ಭರವಸೆ ಇದೆ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಮಾತನಾಡಿ, ಶಕ್ತಿನಗರ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್‌ನಲ್ಲಿ ಇರುವಂತ ಪ್ರದೇಶ, ಈ ಒಂದು ಮತದಾನ ಜಾಗೃತಿ ಕಾರ್ಯಕ್ರಮವನ್ನು ಸದುಉಪಯೋಗ ಪಡೆದುಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ತಾ.ಪಂ ಇಒ ರಾಮರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.