ಆರ್ ಟಿ ಒ ಅಧಿಕಾರಿಗಳಿಂದ ಉಚಿತ ಊಟ ವಿತರಣೆ

ಬೆಂಗಳೂರು,ಜೂ.೬- ಲಾಕ್‌ಡೌನ್ ಪ್ರಾರಂಭವಾದ ದಿನದಿಂದಲೂ ಬಾಗೇಪಲ್ಲಿ ಚೆಕ್‌ಪೋಸ್ಟ್ ನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ವಂತ ಖರ್ಚಿನಲ್ಲಿ ಊಟ ವಿತರಣೆ ಮಾಡುತ್ತಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾರಿಗೆ ಇಲಾಖೆ ಅಧಿಕಾರಿಗಳು ಹೆದ್ದಾರಿಯಲ್ಲಿನ ಹೋಟೇಲ್ ಮತ್ತು ಢಾಭಾಗಳನ್ನು ಆಶ್ರಯಿಸಿದ್ದ ಸಾವಿರಾರು ಚಾಲಕರುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಮೆಚ್ಚುಗೆ ಪಡೆದಿದ್ದಾರೆ
ಲಾಕ್ ಡೌನ್ ನಿಂದಾಗಿ ಲಾರಿ ಮತ್ತು ಟ್ರಕ್ ಚಾಲಕರುಗಳು ತೀವ್ರ ತೊಂದರೆಗೆ ಸಿಲುಕಿಕೊಂಡಿದ್ದರು ಇದನ್ನು ಗಮನಿಸಿ ಊಟ ವಿತರಿಸಲಾಗುತ್ತಿದೆ ಎಂದು ಬಾಗೇಪಲ್ಲಿ ಚೆಕ್ ಪೋಸ್ಟ್ ಎಆರ್‌ಟಿಓ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಸಾಂಕೇತಿಕವಾಗಿ ಊಟ ವಿತರಣೆ ಮಾಡಿದ ನಂತರ ಅದರ ಉಪಯೋಗ ಪಡೆದುಕೊಂಡ ಚಾಲಕರುಗಳು ಬಹಳ ಸಂತಸ ವ್ಯಕ್ತಪಡಿಸಿ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು.ಇದರಿಂದ ಪ್ರೇರೇಪಿತರಾಗಿ ಊಟ ವಿತರಿಸುತ್ತಿರುವುದಾಗಿ ಹೇಳಿದ್ದಾರೆ.

ಪ್ರತಿದಿನ ನೂರಾರು ಟ್ರಕ್ ಮತ್ತು ಲಾರಿ ಚಾಲಕರುಗಳಿಗೆ ಪ್ರತಿ ದಿನ ೩೦೦ ಮಂದಿಗೆ ಮಧ್ಯಾಹ್ನದ ಊಟ ಒದಗಿಸಲಾಗುತ್ತಿದ್ದು ಲಾಕ್‌ಡೌನ್ ಮುಗಿಯುವರೆಗೂ ಮುಂದುವರೆಸಲಾಗುವುದು ಎಂದಿದ್ದಾರೆ.