ಆರ್.ಜೆ. ಬಂಧಿಸಿ ಸಿಡಿ ಯುವತಿ ಪರ ವಕೀಲರ ಆಗ್ರಹ

ಬೆಂಗಳೂರು,ಏ.೧-ರಾಸಲೀಲೆ ಸಿಡಿ ಪ್ರಕರಣದಲ್ಲಿ ಆರೋಪಿತ ಸ್ಥಾನದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸದಿದ್ದರೆ ನ್ಯಾಯಾಲಯದ ಮೊರೆ ಹೋಗಲಿದ್ದೇವೆ ಎಂದು ಯುವತಿ ಪರ ವಕೀಲ ಕೆ.ಎನ್.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಸಂಬಂಧ ಇಂದು ಸ್ಥಳದ ಮಹಜರ್ ಮಾಡಲಾಗುತ್ತಿದ್ದು ಇದು ಪ್ರಮುಖ ಪ್ರಕ್ರಿಯೆಯಾಗಿದೆ.ಎಲ್ಲಾ ರೀತಿಯ ಸಾಕ್ಷ್ಯಾಧಾರಗಳನ್ನ ಕಲೆಹಾಕಿದ ಬಳಿಕವೂ ಆರೋಪಿ ಬಂಧಿಸದಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದರು.
ಸಂತ್ರಸ್ತ ಯುವತಿಗೆ ಅನ್ಯಾಯವಾಗುತ್ತಿರುವುದನ್ನು ನೋಡಿ ಜನ ಕೂಡ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ.ಮುಖ್ಯಮಂತ್ರಿ ಯಡಿಯೂರಪ್ಪ ಆರೋಪಿ ಬಂಧಿಸುವಂತೆ ಸೂಚಿಸಬೇಕು. ಇಲ್ಲದಿದ್ದರೆ ನಾಳೆ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಎಸ್?ಐಟಿ ತಂಡ ವಿಚಾರಣೆ ಮಾಡುತ್ತಿದೆ. ೧೬೪ರಡಿ ಸ್ವ ಇಚ್ಛಾ ಹೇಳಿಕೆಗೆ ಸಂಬಂಧಿಸಿದಂತೆ ಬೇಕಾದ ಎಲ್ಲ ಸಾಕ್ಷಿಗಳನ್ನ ಪರಿಶೀಲನೆ ಮಾಡಲಾಗುತ್ತಿದೆ. ಯುವತಿಯ ವೈದ್ಯಕೀಯ ಪರೀಕ್ಷೆ ಮುಗಿದಿದೆ. ಆದರೂ ಆರೋಪಿಯನ್ನ ಬಂಧಿಸುವ ಕೆಲಸ ಆಗಿಲ್ಲ. ಮೊದಲು ಆರೋಪಿ ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಬೇಕಿತ್ತು ಎಂದು ವಕೀಲ ಜಗದೀಶ್? ಅಸಮಾಧಾನ ವ್ಯಕ್ತಪಡಿಸಿದರು.
ಯುವತಿಯ ಪೋಷಕರು ಹೈಕೋರ್ಟ್ ಗೆ ರಿಟ್ ಅರ್ಜಿ ದಾಖಲಿಸಿರುವುದು ಇಚ್ಛೆಯಾಗಿದೆ. ಆದರೆ, ಈ ಪ್ರಕರಣಸಲ್ಲಿ ಯುವತಿಯ ಅಭಿಪ್ರಾಯವೇ ಮುಖ್ಯ. ಪೋಷಕರು ಹೈಕೋರ್ಟ್?ಗೆ ಹೋಗಿರುವುದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಳ್ಳೋದಿಲ್ಲ. ಪೋಷಕರ ನಡೆ ಬಗ್ಗೆ ಅನುಮಾನ ಮೂಡಿದೆ ಎಂದರು.
ಮೊದಲು ಪೋಷಕರು ಮಗಳು ಅಪಹರಣವಾಗಿದ್ದಾಳೆ ಎಂದು ದೂರು ಕೊಟ್ಟಿದ್ದರು. ಅದು ಸುಳ್ಳು ಎನ್ನುವುದು ಸಾಬೀತಾಗಿದೆ. ಈಗ ಕೋರ್ಟ್ ಮೊರೆ ಹೋಗಿದ್ದಾರೆ. ಎಲ್ಲೋ ಪೋಷಕರು ಆರೋಪಿಯ ಹಿಡಿತದಲ್ಲಿದ್ದಾರೆ ಎಂಬುವುದು ಇಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ಆರೋಪಿಯನ್ನ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸೂರ್ಯ ಮುಕುಂದ್ ರಾಜ್ ಅವರು ವಕೀಲರಾಗಿದ್ದು ಕಾಂಗ್ರೆಸ್ ಪಕ್ಷದವರು ಎಂದು ನಾನು ಕರೆದಿಲ್ಲ. ಅವರನ್ನ ನಾನೇ ಕರೆದಿದ್ದು, ನಾನು ಸಾಕಷ್ಟು ಹಿರಿಯ ವಕೀಲರನ್ನು ಕರೆದಿದ್ದೇನೆ. ಅವರ ಸಲಹೆಗಳನ್ನ ಪಡೆಯುತ್ತಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇದಕ್ಕೆ ರಾಜಕೀಯ ಹೇಗೆ ಬಂತು ಎನ್ನುವುದು ಗೊತ್ತಿಲ್ಲ ಎಂದರು.