ಆರ್.ಜೆ ಕಾಲೇಜಲ್ಲಿ ಕನ್ನಡ ರಾಜ್ಯೋತ್ಸವ

ಕಲಬುರಗಿ:ನ.1:ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕಲಬುರಗಿ ನಗರದ ಸರದಾರ ವಲಭಭಾಯಿ ಪಟೇಲ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ರಮಾಬಾಯಿ ಜಹಾಗೀರದಾರ್ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ. ಭುರ್ಲಿ ಪ್ರಹ್ಲಾದ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಿದರು. ನಾಡಗೀತೆ, ರಾóಷ್ಟ್ರಗೀತೆ ಮತ್ತು ಕನ್ನಡ ಕವಿಗಳ ಐದು ಗೀತೆಗಳನ್ನು ಸಮೂಹಿಕವಾಗಿ ಹಾಡಲಾಯಿತು. ದ್ವಿತೀಯ ಪಿ.ಯು ವಿದ್ಯಾರ್ಥಿ ಪೃಥ್ವಿರಾಜ ಪಾಟೀಲ್ ತನ್ನ ಭಾಷಣದಲ್ಲಿ ಕಲಿಯಕ್ಕೆ ಸಾವಿರ ಭಾಷೆ ಆಡೋಕೆ ಒಂದೇ ಭಾಷೆ ಅದುವೇ ಕನ್ನಡ. ವರ್ಣಮಾಲೆ, ಕನ್ನಡ ಪರಂಪರೆ, ಸಾಹಿತ್ಯದ ಪ್ರಶಂಸೆಯನ್ನು ಕುರಿತು ಮಾತನಾಡಿದನು. ಪ್ರಾಂಶುಪಾಲರು ತಮ್ಮ ಬಾಷಣದಲ್ಲಿ ಕನ್ನಡ ಎಲ್ಲರೂ ಮಾತಾಡಬೇಕು, ಪ್ರೀತಿಸಬೇಕು, ಬೆಳೆಸಬೇಕು ಎಂದು ತಮ್ಮ ಬಾಲ್ಯದ ನೆನಪುಗಳು ಕನ್ನಡದ ಹೆಮ್ಮೆಯ ಬಗ್ಗೆ ಮಾತನಾಡಿದರು.

ಕನ್ನಡ ಉಪನ್ಯಾಸಕರಾದ ಮಳೇಂದ್ರ ಹಿರೇಮಠ ಅವರು ಕನ್ನಡದ ಪರಂಪರೆ, ಸಂಸ್ಕøತಿ, ಪ್ರಾದೇಶಿಕ ಭಾಷಾ ಅಭಿಮಾನ ಮತ್ತು ಇತಿಹಾಸ ಬಗ್ಗೆ ಮಾತನಾಡುತ್ತಾ ಬ್ರಿಟೀಷ್ ಅಧಿಕಾರಿಗೆ ಕೊಡಮಾಡಿದ ಪ್ರಮಾಣ ಪತ್ರದ ಮುದ್ರಣ ಕನ್ನಡದಲ್ಲಿ ಇದ್ದಿದ್ದು ಕನ್ನಡದ ಪ್ರಾಚೀನತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಉಪನ್ಯಾಸಕರು, ಸಿಬ್ಭಂದಿ ಬಳಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.