ಕಲಬುರಗಿ:ಜೂ.5: ನಗರದ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ|| ಭುರ್ಲಿ ಪ್ರಹ್ಲಾದ ರವರು ಹಾಗೂ ಕಾಲೇಜಿನ ಉಪನ್ಯಾಸಕ ಸಿಬ್ಬಂಧಿ ಬಳಗ ಕಲ್ಪವೃಕ್ಷ (ತೆಂಗಿನ ಮರ) ಸಸಿಗೆ ನೀರೆರೆಯುವುದರ ಮುಖಾಂತರ ಪರಿಸರಕ್ಕೆ ಮಹತ್ವ ನೀಡಿದರು.
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ವಿದ್ಯಾರ್ಥಿಗಳು ನಿಮ್ಮ ಮನೆಯಲ್ಲಿ ಗಿಡ ನೆಡುವುದರ ಮುಖಾಂತರ ಪರಿಸರ ಸಂರಕ್ಷಣೆಯನ್ನು ಮಾಡಬೇಕೆಂದು ಕರೆನೀಡಿದರು. ಕಾಲೇಜಿನ ಉಪನ್ಯಾಸಕರಾದ ಕೇದಾರ ದೀಕ್ಷಿತ್, ಮಳೇಂದ್ರ ಹಿರೇಮಠ ಪ್ರಕಾಶ ಚವ್ಹಾಣ, ವೈಶಾಲಿ ದೇಶಪಾಂಡೆ, ಮಂಜುಳಾ ಪಲ್ಲೆದ್, ದಿವ್ಯಾ ಪಟವಾರಿ, ಸೋನಿಯಾ ಕೆ, ಶಾಂತೇಶ ಹೆಚ್, ಚಂದ್ರಭಾನು, ಸಿದ್ರಾಮ್ ಎಸ್ ಮುಂತಾದವರು ಭಾಗಿಯಾಗಿದ್ದರು.