ಆರ್.ಜೆ.ಕಾಲೇಜನಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣ

ಕಲಬುರಗಿ:ಫೆ.18: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ರಾಜ್ಯ ಸರಕಾರದ ಆದೇಶದಂತೆ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ, ಪೂಜೆಯನ್ನು ಪ್ರಾಚಾರ್ಯರಾದ ಡಾ|| ಭುರ್ಲಿ ಪ್ರಹ್ಲಾದ ರವರು ನೆರವೇರಿಸಿದರು. ಕಾಯಕವೇ ಕೈಲಾಸವೆಂದು ಜಗತ್ತಿಗೆ ಸಾರಿದ ಬಸವಣ್ಣನವರು ಸಾಮಾಜಿಕ ಕಳಕಳಿ, ಸಾಂಸ್ಕøತಿಕ ಸಮಾನತೆ ಬಗ್ಗೆ ಅಪಾರ ಕಾಳಜಿ ಹೊಂದಿದರು. ಇಂತಹಾ ಮಹಾತ್ಮರಿಗೆ ಸಾಂಸ್ಕøತಿಕ ನಾಯಕ ಎಂದು ಘೋಷಿಸಿದ್ದಕ್ಕಾಗಿ ಸರಕಾರಕ್ಕೆ ಅಭಿನಂದನೆಗಳನ್ನು ಹೇಳಿದರು. ಕಾಲೇಜಿನ ಉಪನ್ಯಾಸಕರಾದ ಮಳೇಂದ್ರ ಹಿರೇಮಠ, ಪ್ರಕಾಶ ಚವ್ಹಾಣ, ರಾಮದಾಸು ಬಿ, ಉಪೇಂದ್ರ, ಚಂದ್ರಭಾನು, ಡಿ. ಕೊಂಡಲರಾವ್, ಅಜಯ್‍ದತ್, ವೈಭವ ಕುಲಕರ್ಣಿ, ನಿತಿನ ಕುಲಕರ್ಣಿ, ಸಂತೋಷ ಕುಲಕರ್ಣಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.