ಆರ್.ಕೆ.ಪೌಂಡೇಷನ್ ಅಧ್ಯಕ್ಷ ಮೋಹನ್‌ಕೃಷ್ಣ ಮತ ಬೇಟೆ

filter: 0; jpegRotation: 0; fileterIntensity: 0.000000; filterMask: 0; module:0facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 116.0; hist255: 0.0; hist252~255: 0.0; hist0~15: 0.0;

ಕೆಜಿಎಫ್.ಏ:೨೦-ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕೋಲಾರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲೇಶಬಾಬು ಅವರನ್ನು ಬೆಂಬಲಿಸಿ ಅವರ ಪರವಾಗಿ ಆರ್.ಕೆ.ಫೌಂಡೇಷನ್ ಅಧ್ಯಕ್ಷ ಸಮಾಜ ಸೇವಕ ಮೋಹನ್‌ಕೃಷ್ಣ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದ ಎಂ.ಜಿ.ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಬಿಇಎಂಎಲ್ ಮೈಯಿನ್ ಗೇಟ್ ಬಳಿ ಮತಬೇಟೆ ನಡೆಸಿದರು.
ಈ ವೇಳೆ ಎಂ.ಜಿ.ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಚೇರಿಗೆ ಭೇಟಿ ನೀಡಿದ ಆರ್.ಕೆ.ಪೌಂಡೇಷನ್ ಅಧ್ಯಕ್ಷ ಮೋಹನ್‌ಕೃಷ್ಣ ಎಂ.ಜಿ.ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರ ಕಷ್ಟಗಳು ದಶಕಗಳಿಂದ ಭಗೆಹರಿಯದೆ ಉಳಿದಿದೆ ಹಿಂದೆ ಇದ್ದಂತಹ ಶಾಸಕರು ಇಧೀಗ ಕಳೆದ ೬ ವರ್ಷಗಳಿಂದ ಅಧಿಕಾರದಲ್ಲಿರುವ ಶಾಸಕರು ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಆದರೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬು ಪರವಾಗಿ ಮತ ನೀಡಿದರೆ ನಾನು ಕಾನೂನು ಬದ್ಧವಾಗಿ ಹೇಗೆ ನಿಮ್ಮ ಕೆಲಸವಾಗಬೇಕು ಎಂದು ಹೇಳಿದರೆ ಹಾಗೇ ಮಲ್ಲೇಶಬಾಬು ರವರ ಬೆನ್ನ ಹಿಂದೆ ಬಿದ್ದು ನಿಮ್ಮ ಕೆಲಸ ಮಾಡಿಕೊಡುತ್ತೇನೆ ಮತ್ತು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಆಶ್ವಾಸನೆಗಳನ್ನು ನೀಡಿದರು.
ದೇಶವು ಅಭಿವೃದ್ಧಿ ಪರವಾಗಿ ಮುನ್ನೆಡೆಯಬೇಕಾದರೆ ವ್ಯಾಪಾರಸ್ಥರು ಕೇಂದ್ರ ಸರ್ಕಾರದ ಬಿಇಎಂಎಲ್ ಕಾರ್ಮಿಕರು ಮೈತ್ರಿ ಅಭ್ಯರ್ಥಿ ಕೈ ಬಲಪಡಿಸಬೇಕಿದೆ ಎಂದು ಹೇಳಿದರು.