ಆರ್.ಕೆ.ಅಚ್ಯುಮೆಂಟ್ ಅಕಾಡೆಮಿ : ಕರಾಟೆಯಲ್ಲಿ ೧೭ ಪದಕ

ರಾಯಚೂರು.ಅ.೨೯- ಆರ್.ಕೆ.ಅಚ್ಯುಮೆಂಟ್ ಸ್ಪೋರ್ಟ್ ಅಕಾಡೆಮಿಗೆ ೧೭ ಪದಕಗಳು ಬಂದಿವೆ ಎಂದು ಸಂಸ್ಥಾಪಕ ಅಧ್ಯಕ್ಷ ಕೆ.ರಾಜೇಶಕುಮಾರ ತಿಳಿಸಿದ್ದಾರೆ. ತೆಲಂಗಾಣ ರಾಜ್ಯದ ಮಕ್ತಾಲ್‌ನಲ್ಲಿ ಅ.೨೩ ರಂದು ನಡೆದ ೧೫ ನೇ ನ್ಯಾಷನಲ್ ಲೇವಲ್ ಓಪನ್ ಚಾಂಪಿಯನ್ ಶಿಪ್ ಕರಾಟೆ ಪಂದ್ಯಾವಳಿಯಲ್ಲಿ ಆರ್.ಕೆ.ಅಚ್ಯುಮೆಂಟ್ ಸ್ಪೋರ್ಟ್ ಅಕಾಡೆಮಿ ವತಯಿಂದ ಪಾಲ್ಗೊಂಡ ಪಟುಗಳು ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಂ.ಪಿ.ದೀಕ್ಷಿತ್ ರೆಡ್ಡಿ, ಶೋಭಿತ್ ಪಿ., ಚೈತನ್ಯ ಇವರು ಅತ್ಯುತ್ತಮ ಪ್ರದರ್ಶನ ನೀಡಿ, ಚಿನ್ನದ ಪದಕ ಗಳಿಸಿದ್ದಾರೆ. ಗುರುದತ್ ವಿಕ್ರಮ್, ಆಕಾಶ್, ಚೈತನ್ಯ ಇವರು ಬೆಳ್ಳಿ ಪದಕ ಸಾಧಿಸಿದ್ದಾರೆ. ಎಂ.ಪಿ.ಅಕ್ಷಿತ್ ರೆಡ್ಡಿ, ವೆಂಕಟೇಶ ಕುಂಡೂರ್, ಅಚ್ಯುತ್ ರೆಡ್ಡಿ ಡಿ.ಗೌಡ, ಸಾತ್ವೀಕ್, ಜತೀನ್ ಗಟ್ಟು, ಸುದೀಪಕುಮಾರ ಜೆ.ಎಸ್., ಮಹಿಮಾ, ಅಮಿತ್ ಬಾಷಾ ಇವರು ಕಂಚಿನ ಪದಕ ಗಳಿಸಿದ್ದಾರೆ. ಆರ್.ಕೆ.ಅಚ್ಯುಮೆಂಟ್ ಸ್ಪೋರ್ಟ್ ಅಕಾಡೆಮಿಯ ಎಲ್ಲಾ ವಿದ್ಯಾರ್ಥಿಗಳು ಸಾಧನೆಗೆ ಕೆ.ರಾಜೇಶಕುಮಾರ ಮತ್ತು ಮಂಜುಳಾ ಇವರು ಸಂತಸ ವ್ಯಕ್ತಪಡಿಸಿದ್ದಾರೆ.