ಆರ್ ಎಸ್ ಎಸ್ ಅಂದರೆ ಮೈಲಿಗೆ ಏಕೆ? ಮಾಜಿ ಸಿಎಂ ಸಿದ್ದುಗೆ ಹಳ್ಳಿಹಕ್ಕಿ ತಿರುಗೇಟು

ಮೈಸೂರು, ಡಿ.27: ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸುವ ಕುರಿತು ಆರ್ ಎಸ್ ಎಸ್ ಕುಮ್ಮಕ್ಕು, ದೇಶದಲ್ಲಿ ಆರ್ ಎಸ್ ಎಸ್ ಸಂಘಟನೆಯನ್ನು ಬ್ಯಾನ್ ಮಾಡಿದ್ದಾರಾ? ಆರ್ ಎಸ್ ಎಸ್ ಅಂದರೆ ಮೈಲಿಗೆ ಏಕೆ? ಆರ್ ಎಸ್ ಎಸ್, ಯೂಥ್ ಕಾಂಗ್ರೆಸ್, ಯುವ ಜನತಾದಳ, ಯುವ ಮೋರ್ಚಗಳಿವೆ. ಎಲ್ಲರ ಬೆಂಬಲ ನಮಗೆ ಬೇಕಾಗಿದೆ. ಬರೀ ಆರ್ ಎಸ್ ಎಸ್ ಬಗ್ಗೆ ಏಕೆ ಹೇಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಹಳ್ಳಿಹಕ್ಕಿ ವಿಶ್ವನಾಥ್ ಪರೋಕ್ಷ ತಿರುಗೇಟು ನೀಡಿದರು.
ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೀಗಾಗಲೇ ಸಿದ್ದರಾಮಯ್ಯ ಅವರನ್ನು ಹೋರಾಟಕ್ಕೆ ಕರೆದಿದ್ದೇನೆ. ಅವರು ನಮ್ಮ ಜೊತೆಗೆ ಇದ್ದಾರೆ. ಇದಕ್ಕೆ ಸಿದ್ದರಾಮಯ್ಯ ವಿರೋಧ ಇಲ್ಲ. ಇಡೀ ಸಮುದಾಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಕುರುಬ ಸಮಾಜ ಎಸ್‍ಟಿ ಸೇರ್ಪಡೆ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಚಳವಳಿ ಕೂಡ ಮಾಡುತ್ತೇವೆ. ಇದು ನನ್ನ, ಈಶ್ವರಪ್ಪ, ಸಿದ್ದರಾಮಯ್ಯ ಪ್ರತಿಷ್ಟೆ ಅಲ್ಲ ಎಂದು ಎಚ್.ವಿಶ್ವನಾಥ್ ಹೇಳಿದರು.
29ಕ್ಕೆ ಮೈಸೂರಿನಲ್ಲಿ ಕುರುಬ ನಾಯಕರ ಸಭೆ ಏರ್ಪಡಿಸಲಾಗಿದೆ. ಅಲ್ಲಿ ಹೋರಾಟದ ಮುಂದಿನ ರೂಪುರೇಷೆ ಮಾಡಲಾಗುತ್ತೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ವಿಶ್ವನಾಥ್ ಮಾಹಿತಿ ನೀಡಿದ್ದಾರೆ.
ಜಗತ್ತಿನಾದ್ಯಂತ ವಿಶಿಷ್ಠವಾದ ಸಮುದಾಯಗಳನ್ನು ಎಸ್‍ಟಿ ಗೆ ಸೇರಿಸುವ ಪರಿಪಾಠ ಇದೆ. ಕುರುಬ ಸಮುದಾಯ ಪ್ರಮುಖ ಸಂಸ್ಕೃತಿ ಅಲೆಮಾರಿತನ. ಈಗಲೂ ರಸ್ತೆಗಳಲ್ಲಿ, ಕುರಿಗಾಯಿಗಳನ್ನು ಪ್ರದೇಶದಿಂದ ಪ್ರದೇಶಕ್ಕೆ ಸಂಚಾರಿಗಳು ಇದ್ದಾರೆ. ಅಂತಹ ಜೀವನ ಶೈಲಿ ಈಗಲೂ ಉಳಿಸಿಕೊಂಡಿದ್ದೇವೆ. ನಾವು ಎಲ್ಲರ ಸಹಕಾರ ಕೇಳುತ್ತಿದ್ದೇವೆ ಎಂದಿದ್ದಾರೆ.
ನಿರಂಜನಾನಂದಪುರ ಸ್ವಾಮಿಗಳ ಮೂಲಕ ನಾನು ಹಾಗೂ ಸೋಮಶೇಖರ್ ವರದಿ ಸರ್ಕಾರಕ್ಕೆ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಕೂಡ ಕುರುಬ ಸಮುದಾಯದ ಸಂಪ್ರದಾಯ ಮನಗಂಡು ಎಸ್‍ಟಿ ಸೇರ್ಪಡೆ ಮಾಡಬೇಕು. ಮೇಲ್ವರ್ಗದ ಜನ ಕೂಡ ನಮಗೆ ಸಹಕಾರ ನೀಡುವ ಮೂಲಕ ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.