ಆರ್ ಎಸ್ ಆಯ್ ಸ್ಪರ್ಧಾತ್ಮಕ ಪರಿಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

ಇಂಡಿ:ಮಾ.28: ಆರ್ ಎಸ್ ಆಯ್ ಸ್ಪರ್ಧಾತ್ಮಕ ಪರಿಕ್ಷೆಯಲ್ಲಿ ನಿರಂತರ ಪರಿಶ್ರಮದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತಾಲೂಕಿನ ಹಿರೇಬೇವನೂರ ಗ್ರಾಮದ ಗಣೇಶ ತಂದೆ ಈಶ್ವರ ನಾಯ್ಕೋಡೆ ಇವರು ಜಿಲ್ಲೆಯ ತಾಲೂಕಿನ ಹಾಗೂ ಗ್ರಾಮದ ಕಿರ್ತೀ ಹೆಚ್ಚಿಸಿದ್ದಾರೆ. ಗ್ರಾಮದ ಹಿರಿಯರು ಇವರನ್ನು ಸನ್ಮಾನಿಸಿ ಹರ್ಷ ವ್ಯಕ್ತ ಪಡಿಸಿದರು. ಇದರಿಂದ ಯುವ ಪಿಳ್ಳಿಗೆಗೆ ಸಾಧನೆಗೆ ಮಾರ್ಗದರ್ಶಕವಾಗಿದೆ ಎಂದು ಗ್ರಾಮಸ್ಥರು ಅಭೀಪ್ರಾಯಪಡುತ್ತಿದ್ದಾರೆ.