ಆರ್ ಎಂ ಕುತೂಹಲ ಹೆಚ್ಚಳ

ಯಾವುದೇ ಚಿತ್ರ ಜನರನ್ನು ಆಕರ್ಷಿಸುವಲ್ಲಿ ಶೀರ್ಷಿಕೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಅಂಥದ್ದೇ ವಿಶೇಷ ಶೀರ್ಷಿಕೆಯಡಿ ಆರಂಭವಾಗುತ್ತಿರುವ ಹೊಸ ಚಿತ್ರ   “ಆರ್‌ಎಂ ? ” (ರಕ್ಷಿತಾ ಮಂಜುಳ).

ಇಬ್ಬರು ಯುವತಿಯರು ಮತ್ತು  ಯುವಕನ‌ ನಡುವೆ ನಡೆಯುವ ಘಟನೆಗಳನ್ನಿಟ್ಟುಕೊಂಡು  ವಿಭಿನ್ನ ಪ್ರೇಮಕಥೆ  ಹೇಳಹೊರಟಿದ್ದಾರೆ  ನಿರ್ದೇಶಕ ದೇವು.‌ ರಕ್ಷಿತಾ ಮಂಜುಳಾ ಚಿತ್ರ ನಟಿಯರಾ ಅಥವಾ ಇಲ್ಲವೇ ಎನ್ನುವುದು ಕುತೂಹಲ ಕೆರಳಿಸಿದ್ದು  ಸದ್ದದಲ್ಲೇ ಸೆಟ್ಟೇರಲಿದೆ.  ಚಿತ್ರದಲ್ಲಿ  ಹುಡುಗಿಯರಿಬ್ಬರು ಯುವಕನಿಗೆ ಯಾವರೀತಿ ಮೋಸ ಮಾಡುತ್ತಾರೆ ಎಂದು ಹೇಳಲಾಗಿದೆ.ಪ್ರೇಮಕಥೆಯ ಜೊತೆಗೆ ಥ್ರಿಲ್ಲರ್ ಕಂಟೆಂಟ್  ಇರುವ ಚಿತ್ರ ಇದಾಗಿದೆ.

ಚಿತ್ರವನ್ನು  ಭರತ್‌ಕುಮಾರ್ ಚಂದ್ರಶೇಖರ್ ಹೂಗಾರ್ ನಿರ್ಮಾಣ ಮಾಡುತ್ತಿದ್ದಾರೆ.  ಚಿತ್ರದ ಶೀರ್ಷಿಕೆಯನ್ನು ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.ಶ್ರೀರಾಮ ಸೇನೆಯ ಸಂಚಾಲಕ ರಾಜು ಖಾನಪ್ಪ, ಸುಂದರೇಶ್ ನರಗಲ್ ಹಾಜರಿದ್ದರು.

ಆಗಸ್ಟ್  ಕೊನೆಯಲ್ಲಿ ಚಿತ್ರದ ಮುಹೂರ್ತ ಗದುಗಿನ  ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ನಡೆಸಲಲು ಉದ್ದೇಶಿಸಲಾಗಿದೆ. ಚಿತ್ರವನ್ನು ಬೆಂಗಳೂರು, ಮಂಡ್ಯ, ಹುಬ್ಬಳ್ಳಿ ಹಾಗೂ ಗದಗ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣವನ್ನು ನಡೆಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಚಿತ್ರದಲ್ಲಿ ಒಟ್ಟು ೪ ಹಾಡುಗಳಿದ್ದು, ಸದ್ಯ ಚಿತ್ರದ ತಾಂತ್ರಿಕವರ್ಗ ಹಾಗೂ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.