ಆರ್ ಆರ್ ತಂಡದ ಜೆರ್ಸಿ ಬಿಡುಗಡೆ

ಜೈಪುರ,ಏ.೫- ಇಂಡಿಯನ್ ಪ್ರೀಮಿಯರ್ ಲೀಗ್ ಈ ತಿಂಗಳ ೯ ರಿಂದ ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್‌ನ ತಂಡದ ಜೆರ್ಸಿ ಬಿಡುಗಡೆ ಮಾಡಲಾಗಿದೆ.
ರೆಡ್ ಬುಲ್ ಇಂಡಿಯಾದ ಸಹಭಾಗಿತ್ವದಲ್ಲಿ ೨೦೨೧ ರ ಪಂದ್ಯಾವಳಿಯಲ್ಲಿ ಜರ್ಸಿಯೊಂದಿಗೆ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರು ಕಣಕ್ಕೆ
ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಅದ್ಭುತವಾದ ೩ಡಿ ಪ್ರೊಜೆಕ್ಷನ್ ಮತ್ತು ಲೈಟ್ ಶೋ ಆಡಿಯೊ-ವಿಷುಯಲ್ ಪ್ರದರ್ಶನ ಕ್ರೀಡಾಂಗಣದಿಂದ ವಿಶ್ವದಾದ್ಯಂತದ ಅಭಿಮಾನಿಗಳಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರನ್ನು ಹುರಿದುಂಬಿಸಿದೆ.
ಜೈಪುರ ನಗರ, ರಾಜಸ್ಥಾನಿ ಸಂಸ್ಕೃತಿ ಮತ್ತು ಭೂದೃಶ್ಯ – ಹಾಗೆಯೇ ರೆಡ್ ಬುಲ್ ಅವರೊಂದಿಗಿನ ಫ್ರ್ಯಾಂಚೈಸ್ ಒಡನಾಟವು ಅವರಿಗೆ ತ್ವರಿತ ಗತಿಯಲ್ಲಿ ಮುಂದುವರಿಯಲು, ಹೊಸ ಆಲೋಚನೆಗಳನ್ನು ಹೊರತಂದು ತಂಡದ ಬೆಳವಣಿಗೆಗೆ ಸಹಾಯ ಮಾಡುವುದರ ಪ್ರತಿಬಿಂಬ – ಇವೆಲ್ಲವುಗಳ ಆಚರಣೆಯಾಗಿತ್ತು.
ರಾಜಸ್ಥಾನ್ ರಾಯಲ್ಸ್ ಆಲ್‌ರೌಂಡರ್ ಮತ್ತು ರೆಡ್ ಬುಲ್ ಅಥ್ಲೀಟ್ ರಿಯಾನ್ ಪರಾಗ್ “ಕಳೆದ ವರ್ಷದಲ್ಲಿ, ಅದ್ಭುತ ಐಪಿಎಲ್ ೨೦೨೦ ತಂಡದ ಜೆರ್ಸಿಗಳನ್ನು ಅನಾವರಣಗೊಳಿಸಲು ಮತ್ತು ಹಸ್ತಾಂತರಿಸಲು ರೆಡ್ ಬುಲ್ ಅಥ್ಲೀಟ್ ಡ್ಯಾನಿ ರೋಮನ್ ದುಬೈನ ನಮ್ಮ ಹೋಟೆಲ್ ಬೀಚ್ ಸೈಡ್‌ಗೆ ಹಾರಿಬಂದಿದ್ದನ್ನು ರಾಜಸ್ಥಾನ್ ರಾಯಲ್ಸ್ ತಂಡ ಸಂಭ್ರಮಿಸಿದೆ. ಈ ವರ್ಷ, ಮಹತ್ವದ ಜರ್ಸಿಯ ಅನಾವರಣ, ಮತ್ತು ಈ ಪಂದ್ಯಾವಳಿಯಲ್ಲಿ ಅಭಿಮಾನಿಗಳನ್ನು ಹೆಮ್ಮೆ ಪಡುವಂತೆ ಮಾಡಲು ಎದುರು ನೋಡುತ್ತಿದ್ದೇವೆ. ” ಎಂದು ಹೇಳಿದ್ದಾರೆ.